ಈಶಾನ್ಯ ಪದವೀಧರ ಚುನಾವಣೆ ಮತ ಎಣಿಕೆ
*ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ ಮತ ಎಣಿಕೆ:*
*ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ ಮತ ಎಣಿಕೆ:*
#ಪ್ರಥಮ ಪ್ರಾಶಸ್ತ್ಯದ ಅಂತಿಮ ಎಂಟನೇ ಸುತ್ತಿನ ಮತ ಎಣಿಕೆ ಮುಕ್ತಾಯ #8ನೇ ಸುತ್ತಿನ ಅಂತ್ಯಕ್ಕೆ
ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಅವರು 39,496 ಮತಗಳು ಪಡೆದಿದ್ದು, 4,446 ಮತಗಳಿಂದ ಮುನ್ನಡೆ #ಪ್ರತಿಸ್ಪರ್ಧಿ ಬಿ.ಜೆ.ಪಿ ಅಭ್ಯರ್ಥಿ ಅಮರನಾಥ ಪಾಟೀಲ 35,050 & ಸ್ವತಂತ್ರ ಅಭ್ಯರ್ಥಿ ಎನ್.ಪ್ರತಾಪರೆಡ್ಡಿ ಅವರು 17,421 ಮತ ಪಡೆದಿದ್ದಾರೆ. 12,512 ಮತಗಳು ತಿರಸ್ಕೃತ #ಒಟ್ಟಾರೆ ಮತ ಚಲಾವಣೆಯ ಎಲ್ಲಾ 1,09,027 ಮತಗಳ ಎಣಿಕೆ ಮುಕ್ತಾಯವಾಗಿದೆ.
ಪ್ರಥಮ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಪುರಸ್ಕೃತ ಮತಗಳ ಪೈಕಿ ಯಾವುದೇ ಅಭ್ಯರ್ಥಿ ಶೇ.50+1 ವಿನ್ನಿಂಗ್ ಕೋಟಾ ಮತ ಪಡೆಯದ ಕಾರಣ ಎರಡನೇ ಪ್ರಾಶಸ್ತ್ಯ ಮತ ಎಣಿಕೆ ಆರಂಭವಾಗಿದೆ.
#ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯ
3ನೇ ಸುತ್ತಿನ ಅಂತ್ಯಕ್ಕೆ
ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಅವರು 13,878 ಮತಗಳು ಪಡೆದಿದ್ದು, 715 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿ.ಜೆ.ಪಿ ಅಭ್ಯರ್ಥಿ ಅಮರನಾಥ ಪಾಟೀಲ 13,163 & ಸ್ವತಂತ್ರ ಅಭ್ಯರ್ಥಿ ಎನ್.ಪ್ರತಾಪರೆಡ್ಡಿ ಅವರು 8,118 ಮತ ಪಡೆದಿದ್ದಾರೆ. 5,021 ಮತಗಳು ತಿರಸ್ಕೃತ #ಇದೂವರೆಗೆ ಒಟ್ಟಾರೆ 41,966 ಮತಗಳ ಎಣಿಕೆ ಮುಕ್ತಾಯವಾಗಿದೆ.
#ಎರಡನೇ ಸುತ್ತಿನ ಮತ ಎಣಿಕೆ ಮುಕ್ತಾಯ #
ಎರಡನೇ ಸುತ್ತಿನ ಅಂತ್ಯಕ್ಕೆ ಬಿ.ಜೆ.ಪಿ. ಅಭ್ಯರ್ಥಿ ಅಮರನಾಥ ಪಾಟೀಲ ಅವರು 8,732 ಮತಗಳು ಪಡೆದಿದ್ದು, 309 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ 8,423 & ಸ್ವತಂತ್ರ ಅಭ್ಯರ್ಥಿ ಎನ್.ಪ್ರತಾಪರೆಡ್ಡಿ ಅವರು 6,163 ಮತ ಪಡೆದಿದ್ದಾರೆ. 3,429 ಮತಗಳು ತಿರಸ್ಕೃತ #ಇದೂವರೆಗೆ ಒಟ್ಟಾರೆ 27,981 ಮತಗಳ ಎಣಿಕೆ ಮುಕ್ತಾಯವಾಗಿದೆ.
ಮೊದಲ ಸುತ್ತಿನಲ್ಲಿ ಬಿಜೆಪಿ ಮುಂದೆ
ಪ್ರಥಮ ಸುತ್ತಿನ ಮತ ಎಣಿಕೆ ಮುಕ್ತಾಯ #ಬಿ.ಜೆ.ಪಿ. ಅಭ್ಯರ್ಥಿ ಅಮರನಾಥ ಅವರು 4,521 ಮತಗಳು ಪಡೆದಿದ್ದು, 306 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಸಮೀಪದ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಅವರು 4,215 ಮತಗಳು ಮತ್ತು ಸ್ವತಂತ್ರ ಅಭ್ಯರ್ಥಿ ಎನ್.ಪ್ರತಾಪರೆಡ್ಡಿ ಅವರು 3,037 ಮತಗಳು ಪಡೆದಿದ್ದಾರೆ. 1,585 ಮತಗಳು ತಿರಸ್ಕೃತವಾಗಿವೆ. ಇದೂವರೆಗೆ ಒಟ್ಟಾರೆ 13,990 ಮತಗಳ ಎಣಿಕೆ ಮುಕ್ತಾಯವಾಗಿದೆ.