ಕೊಪ್ಪಳದ ಹಿರಿಯ ಜೀವ ವೀರಯ್ಯ ಹಿರೇಮಠ ನಿಧನ
ಕೊಪ್ಪಳ: ನಗರದ ಅಂಬೇಡ್ಕರ್ ವೃತ್ತದ ಹತ್ತಿರದ ಸಾಲಾರ್ ಜಂಗ್ ರಸ್ತೆಯ ಹಿರಿಯ ನಿವಾಸಿಗಳಾದ ವೀರಯ್ಯ ಹಿರೇಮಠ(86) ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಕೊಪ್ಪಳದ ಗವಿಮಠ ಹತ್ತಿರದ ರುದ್ರಭೂಮಿಯಲ್ಲಿ ಜರುಗಲಿದೆ. ಮೃತರು ಕೊಪ್ಪಳದ ಪತ್ರಕರ್ತ ಶಿವಕುಮಾರ ಹಿರೇಮಠ ಅವರ ತಂದೆಯವರಾಗಿದ್ದಾರೆ. ಮೃತರು ಪತ್ನಿ, ಆರು ಜನ ಪುತ್ರಿಯರು ಸೇರಿದಂತೆ ಪತ್ರಕರ್ತ ಶಿವಕುಮಾರ ಹಿರೇಮಠ ಪುತ್ರ, ಮೊಮ್ಮಕ್ಕಳು, ಅಪಾರ ಬಂದು ಬಳಗ ಅಗಲಿದ್ದಾರೆ.