ಪಯೋನಿಯರ್ ಶಾಲೆ ಅಕ್ಷರ ಗೊಂಡಬಾಳ ಜಿಲ್ಲಾಮಟ್ಟಕ್ಕೆ

ಕೊಪ್ಪಳ: ಇಲ್ಲಿನ ಭಾಗ್ಯನಗರದ ಪಯೋನಿಯರ್ ಪಬ್ಲಿಕ್ ಸ್ಕೂಲ್ 6 ನೇ ತರಗತಿಯ ವಿದ್ಯಾರ್ಥಿನಿ ಅಕ್ಷರ ಎಂ. ಗೊಂಡಬಾಳ ಅವರು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದ ತಾಲೂಕ ಮಟ್ಟದ 5 ರಿಂದ 7 ನೇ ತರಗತಿಯ ಭಕ್ತಿ ಗೀತೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ನಗರದ ಬಾಲಿಕೆಯರ ಸರಕಾರಿ ಪ್ರೌಢ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಬಾಲಿಕೆಯರ ಸರಕಾರಿ ಪ್ರೌಢ ಶಾಕೆ ಆಶ್ರಯದಲ್ಲಿ ಇಂದು ಜರುಗಿದ ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಸೇರಿ ಅನೇಕ ಅಧಿಕಾರಿಗಳು, ಶಿಕ್ಷಕರು ಬಹುಮಾನವನ್ನು ವಿತರಿಸಿದರು. ಜಿಲ್ಲಾಮಟ್ಟಕ್ಕೆ ಆಯ್ಜೆಯಾದ ವಿಜೇತ ಶಾಲೆಯ ವಿದ್ಯಾರ್ಥಿನಿ ಅಕ್ಷರ ಳನ್ನು ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿ ಉಮೇಶ ಕಿಲಾರಿ, ಮುಖ್ಯೋಪಾಧ್ಯಾಯ ಅಶ್ವಥ್, ಶಿಕ್ಷಕರು, ಸಂಗೀತ ಗುರು ಶ್ರೀಶೈಲ ಬಡಿಗೇರ ಅಭಿನಂದಿಸಿದ್ದಾರೆ.

