ಪಯೋನಿಯರ್ ಶಾಲೆ ಎಸ್.ಎಸ್.ಎಲ್.ಸಿ. ಉತ್ತಮ ಸಾಧನೆ
aksharatvkannada badalavane news desk
ಕೊಪ್ಪಳ: ಇಲ್ಲಿನ ಭಾಗ್ಯನಗರದ ಪ್ರತಿಷ್ಠಿತ ಪಯೋನಿಯರ್ ಪಬ್ಲಿಕ್ ಶಾಲೆಯ ಮೊದಲ ಎಸ್.ಎಸ್.ಎಲ್.ಸಿ ಬ್ಯಾಚ್ ಫಲಿತಾಂಶ ಬಂದಿದ್ದು ೧೭ ವಿದ್ಯಾರ್ಥಿಗಳಲ್ಲಿ ೧೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. ೯೪.೧೧% ಫಲಿತಾಂಶ ಬಂದಿದೆ.
ಶಾಲೆಯ ಅನನ್ಯ (೫೯೧) ಶೇ. ೯೪.೫೬, ಸಾಹಿತ್ಯ ಗೊಂಡಬಾಳ (೫೮೭) ಶೇ. ೯೩.೯೨, ಗೌರಿಶಂಕರ (೫೮೧) ಶೇ. ೯೨.೯೬, ಇಕ್ರಾಉರೂಜ್ (೫೭೦) ಶೇ. ೯೧.೨೦, ಶ್ರಾವಣಿ (೫೬೮) ಶೇ. ೯೦.೮೮, ಅರುಂಧತಿ (೫೫೨) ಶೇ. ೮೮.೩೨ ರಷ್ಟು ಫಲಿತಾಂಶ ಪಡೆದು ಶಾಲೆಯ ಆಡಳಿತ ಮಂಡಳಿಯ ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ.
ಶಾಲೆಯ ೧೭ ವಿದ್ಯಾರ್ಥಿಗಳಲ್ಲಿ ಆರು ಡಿಸ್ಟಿಂಕ್ಷನ್, ಎಂಟು ಜನ ಫಸ್ಟ್ ಕ್ಲಾಸ್ ಮತ್ತು ಇಬ್ಬರು ಪಾಸ್ ಕ್ಲಾಸ್ನಲ್ಲಿ ತೇರ್ಗಡೆಯಾಗಿದ್ದು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣಾ ಇಟ್ಟಂಗಿ, ಕಾರ್ಯದರ್ಶಿ ಕೃಷ್ಣಾ ಕಬ್ಬೇರ್, ಪ್ರಾಂಶುಪಾಲರು ಮತ್ತು ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈಚೆಗೆ ಗದುಗಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕುಮಾರಿ ಆಕಾಂಕ್ಷ ಹಾದಿಮನಿ ಸಹ ೩೬೯ ಅಂಕಗಳೊಂದಿಗೆ ತೇರ್ಗಡೆಯಾಗಿದ್ದು, ಆಕೆಯ ಸಾವಿಗೆ ಆಡಳಿತ ಮಂಡಳಿ ಕಂಬನಿ ಮಿಡಿದಿದ್ದು ಸಂತಾಪ ಸೂಚಿಸಿದೆ.