ಬಹುಮುಖ ಪ್ರತಿಭೆ ಸಾಹಿತ್ಯಗೆ ಎಸ್.ಎಸ್.ಎಲ್.ಸಿಯಲ್ಲಿ ಶೇ. ೯೩.೯೨ ಅಂಕ
ಕೊಪ್ಪಳ : ಇಲ್ಲಿನ ನಿವಾಸಿ, ಪತ್ರಕರ್ತ ಮಂಜುನಾಥ ಗೊಂಡಬಾಳ ಮತ್ತು ಮಹಿಳಾ ಕಾಂಗ್ರೆಸ್ ಮುಖಂಡೆ ಜ್ಯೋತಿ ಗೊಂಡಬಾಳ ಅವರ ಪುತ್ರಿ, ಬಹುಮುಖ ಪ್ರತಿಭೆ ಕು. ಸಾಹಿತ್ಯ ಎಂ. ಗೊಂಡಬಾಳ ಎಸ್.ಎಸ್.ಎಲ್.ಸಿಯಲ್ಲಿ ಶೇ. ೯೩.೯೨ ಅಂಕ ಪಡೆದು ಶಾಲೆಗೆ ದ್ವಿತಿಯ ಸ್ಥಾನದ ಮೂಲಕ ತೇರ್ಗಡೆಯಾಗಿದ್ದಾಳೆ.
ಭಾಗ್ಯನಗರದ ಪಯೋನಿಯರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಕು. ಸಾಹಿತ್ಯ ಎಂ. ಗೊಂಡಬಾಳ ಸಂಗೀತ, ನೃತ್ಯ, ಚಿತ್ರಕಲೆ ಹಾಗೂ ವಿವಿಧ ಸಂಗೀತ ವಾದ್ಯಗಳಲ್ಲಿ ಪರಿಣತಿ ಹೊಂದಿದ್ದು, ಓದಿನಲ್ಲಿಯೂ ಸಹ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಹಲವು ಪ್ರತಿಷ್ಠಿತ ಕಾಲೇಜುಗಳಲ್ಲಿ ಉಚಿತ ಶಿಕ್ಷಣ ಪಡೆಯಲು ಭಾಜನಳಾಗಿದ್ದಾಳೆ.