ಕಾಂಗ್ರೆಸ್ ಬಿ ಫಾರ್ಮ್ ಪಡೆದ ಅಭ್ಯರ್ಥಿ ರಾಜಶೇಖರ ಹಿಟ್ನಾಳ
ಬದಲಾವಣೆ ಸುದ್ದಿ, ಕೊಪ್ಪಳ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ “ಬಿ” ಫಾರ್ಮ ಕೊಡುವ ಮೂಲಕ ಅಧಿಕೃತಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಸದಸ್ಯರಾದ ಶರಣೆಗೌಡ ಪಾಟೀಲ, ಕಾಡಾ ಅಧ್ಯಕ್ಷ ಹಸನ್ಸಾಬ ದೋಟಿಹಾಳ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ, ಜಿ. ಪಂ. ಕೆಡಿಪಿ ಸದಸ್ಯ ರವಿ ಕುರಗೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಭಾರಿ ಕಾಂಗ್ರೆಸ್ ಅತ್ಯಂತ ಜಿದ್ದಿನ ಪೈಪೋಟಿ ನೀಡಿದ್ದು, ಕುರುಬ ಸಮುದಾಯಕ್ಕೆ ಕಾಂಗ್ರೆಸ್ ಕೊಪ್ಪಳ ಮತ್ತು ಧಾರವಾಡ ಹುಬ್ಬಳ್ಳಿ ಕ್ಷೇತ್ರದ ಟಿಕೆಟ್ ನೀಡಿದ್ದು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷ ಕುರುಬರನ್ನು ನಿರ್ಲಕ್ಷ್ಯ ಮಾಡಿದೆ, ಅದೇ ರೀತಿ ಮುಸ್ಲಿಂರಿಗೂ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷ ಮುಸ್ಲಿಂರನ್ನೂ ತೀರಾ ಕಡೆಗಣಿಸುವ ಮೂಲಕ ಮುಸ್ಲಿಮರ ಮತಗಳೇ ಬೇಡ ಎನ್ನುತ್ತಿದ್ದಾರೆ ಎಂದು ಬಿ ಫಾರಮ್ ಪಡೆದ ರಾಜಶೇಖರ್ ಹಿಟ್ನಾಳರನ್ನು ಭೇಟಿ ಮಾಡಿ ಮಾತನಾಡಿದರು. ಇನ್ನು ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಡಾ. ಪುಷ್ಟಾ ಅಮರನಾಥ್ ಅವರು ಗ್ಯಾರಂಟಿ ಸಮಿತಿಗೆ ರಾಜ್ಯ ಉಪಾಧ್ಯಕ್ಷರಾಗಿದ್ದು, ಅವರು ಪಕ್ಷದ ಆರು ಜನ ಮಹಿಳೆಯರಿಗೆ ಟಿಕೆಟ್ ಕೊಡಿಸುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ್ದಾರೆ, ಅವರನ್ನೂ ಸಹ ಕೊಪ್ಪಳ ಪ್ರಚಾರಕ್ಕೆ ಆಹ್ವಾನಿಸಿದ್ದೇವೆ ಎಂದು ಜ್ಯೋತಿ ಗೊಂಡಬಾಳ ಹೇಳಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಎರಡು ಮೀಸಲು ಜೊತೆಗೆ ಒಂದು ಹೆಚ್ಚುವರಿ ಸಾಮಾನ್ಯ ಕ್ಷೇತ್ರದಲ್ಲಿ ಸಹ ಕುಮಾರಿ ಪ್ರಿಯಾಂಕಾ ಜಾರಕಿಹೊಳಿಗೆ ಚಿಕ್ಕೋಡಿ ಕ್ಷೇತ್ರದ ಟಿಕೆಟ್ ಕೊಡುವ ಮೂಲಕ ರಾಜ್ಯದ ನಾಲ್ಕನೆ ದೊಡ್ಡ ಸಮುದಾಯಕ್ಕೆ ನ್ಯಾಯ ಕೊಟ್ಟಿದ್ದಾರೆ ಅದಕ್ಕಾಗಿ ಈ ಭಾರಿ ಅಹಿಂದ ಮತಗಳ ಸಮಗ್ರ ಕ್ರೂಢಿಕರಣಗೊಳ್ಳುವ ಜೊತೆಗೆ ಕಾಂಗ್ರೆಸ್ ಸಾಂಪ್ರಾದಾಯಿಕ ಮತಗಳು ಹಾಗೂ ಬಹುತೇಕ ಮುಂದುವರಿದ ಸಮುದಾಯದ ಮತಗಳು ಸಹ ಕಾಂಗ್ರೆಸ್ ಪರವಾಗಿದ್ದು ಸುಮಾರು ೧೮ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲುತ್ತದೆ ಎಂದಿದ್ದಾರೆ.
ಕೊಪ್ಪಳ ಜಿಲ್ಲೆಯಿಂದ ಗ್ಯಾರಂಟಿ ಮತ್ತು ವಿವಿಧ ಸಮಿತಿಗಳಿಗೆ ನಾಮನಿರ್ದೇಶನಗೊಂಡ ಸದಸ್ಯರ ರಾಜ್ಯಮಟ್ಟದ ಶಿಬಿರದಲ್ಲಿ ಪಾಲ್ಗೊಂಡ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಮಾಲತಿ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ, ತಾಲೂಕ ಕೆಡಿಪಿ ಸದಸ್ಯರಾದ ನಾಗರತ್ನ ಹುಲಗಿ, ಸುಮಂಗಲಾ ನಾಯಕ್, ಕುಷ್ಟಗಿಯ ಉಮೇಶ ಮಂಗಳೂರು ಇತರರು ಇದ್ದರು. ಡಿಕೆ ಶಿವಕುಮಾರ ಅವರ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯನವರ ಸಾರಥ್ಯದಲ್ಲಿ ಪಕ್ಷ ಸಾಕಷ್ಟು ಬಲವರ್ಧನೆಗೊಳ್ಳುತ್ತಿದ್ದು, ಹಿಂದೆಂದೂ ಕಾಣದಷ್ಟು ಸಂಘಟಿತಗೊಳ್ಳುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.