ಕೊಪ್ಪಳ ಲೋಕ ಟಿಕೆಟ್ಟೂ ನಂದೇ, ಗೆಲುವು ನಂದೇ : ಹಿಟ್ನಾಳ
ಬದಲಾವಣೆ ಸುದ್ದಿ, ದೆಹಲಿ: ಕೊಪ್ಪಳ ಲೋಕಸಭಾ ಟಿಕೆಟ್ ಈ ಹಿಂದೆ ಕೆಲವೇ ಸಾವಿರ ಮತಗಳ ಅಂತರದಲ್ಲಿ ಸೋತಿದ್ದ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಜಶೇಖರ್ ಹಿಟ್ನಾಳ ಅವರಿಗೆ ಮತ್ತೆ ಲೋಕಸಭೆ ಟಿಕೆಟ್ ದೊರೆಯುವುದು ಬಹುತೇಕ ಟಿಕೆಟ್ ಅಂತಿಮಗೊಳ್ಳಲಿದೆ ಎಂದು ಹೇಳಲಾಗಿದೆ.
ಬೆಂಗಳೂರಿನ ಕೆಪಿಸಿಸಿ ಇಂದ ನಡೆದ ಆಯ್ಕೆ ಸಮಿತಿಯಿಂದ ಒಂದೇ ಹೆಸರು ದೆಹಲಿ ಎಲೆಕ್ಷನ್ ಸ್ಕ್ರೀನಿಂಗ್ ಕಮಿಟಿ ಮುಂದೆ ಬಂದಿದೆ ಎನ್ನಲಾಗಿದೆ, ಆದರೆ ಕೊಪ್ಪಳದಲ್ಲಿ ಬಿಜೆಪಿಯಲ್ಲಿ ಆದ ಬದಲಾವಣೆ ಹಾಗೂ ಗೆಲವಿನ ಅವಕಾಶ ಕಾಣುತ್ತಿದ್ದಂತೆ ಕಾಂಗ್ರೆಸ್ ನಲ್ಲೂ ಸಹ ಟಿಕೆಟ್ ಫೈಟ್ ಸ್ವಲ್ಪ ಜೋರಾಗಿದೆ. ಅದಕ್ಕೆ ರಾಜಶೇಖರ್ ಹಿಟ್ನಾಳ ಅವರ ಸಹೋದರ ಪ್ರಭಾವಿ ಶಾಸಕ, ಸಿಎಂ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ರಾಘವೇಂದ್ರ ಹಿಟ್ನಾಳ ಅವರು ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದು, ಈಗ ಪಟ್ಡಿಯ ಹಿಂದೆ ದೆಹಲಿಗೂ ಹೋಗಿದ್ದಾರೆ. ಸಂಗಣ್ಣ ಕರಡಿ ಪರವಾಗಿ ಮಾಜಿ ಡಿಸಿಎಂ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಬ್ಯಾಟಿಂಗ್ ಮಾಡಿದ್ದಾರೆ, ಡಿಸಿಎಂ ಡಿಕೆ ಶಿವಕುಮಾರ್ ಸಹ ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಇನ್ನು ಸಿಂಧನೂರಿನ ಬಸನಗೌಡ ಬಾದರ್ಲಿ ಪರವಾಗಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಸಹ ಯೋಚನೆ ಮಾಡಿದ್ದಾರೆ, ಆದರೆ ಕೆ. ರಾಜಶೇಖರ್ ಹಿಟ್ನಾಳ ಅವರು ಹೊಸಪೇಟೆ ಕ್ಷೇತ್ರದಲ್ಲಿ ಸಾಕಷ್ಟು ಪಕ್ಷ ಸಂಘಟನೆ ಮಾಡಿ ಟಿಕೆಟ್ ಆಸೆ ಇಟ್ಟುಕೊಂಡಿದ್ದರು ಆದರೆ ಟಿಕೆಟ್ ಸಿಗಲಿಲ್ಲ, ಅಲ್ಲಿನ ಅಭ್ಯರ್ಥಿ ಗೆಲುವಿಗೆ ಕಾರಣರಾದರು, ಇನ್ನು ಕಳೆದ ಸಲ ಮೋದಿಯ ಅಲೆಯಲ್ಲಿ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದರು, ಆಗ ಸಮ್ಮಿಶ್ರ ಗೊಂದಲದಲ್ಲಿ ಜೊತೆಗೆ ಕ್ಷೇತ್ರ ವ್ಯಾಪ್ತಿ ಕೇವಲ ಮೂವರು ಶಾಸಕರು ಮಾತ್ರ ಇದ್ದರು ಈಗ ಅದೂ ಸಹ ಆರಕ್ಕೆ ಏರಿದೆ ಮೇಲಾಗಿ ರಾಜ್ಯದಲ್ಲಿ ಪೂರ್ಣ ಬಹುಮತ ಸರಕಾರವೂ ಇರುವದರ ಜೊತೆಗೆ ಜನ ಗ್ಯಾರಂಟಿಯ ಪರವಾಗಿ ಇದ್ದಾರೆ. ಬಹಳಷ್ಟು ಜನ ಗ್ಯಾರಂಟಿ ಇಂದ ತಮ್ಮ ಜೀವನ ನಡೆಸುತ್ತಿರುವದು ಕಾಂಗ್ರೆಸ್ ಗೆಲುವಿಗೆ ಕಾರಣ ಆಗಬಹುದು ಎನ್ನುವ ಕಾರಣಕ್ಕೆ ಕೈ ಗೆ ಶಕ್ತಿ ಬಂದಿದೆ. ಬಿಜೆಪಿ ಯಲ್ಲಿ ಸಂಗಣ್ಣ ಕರಡಿ ಸ್ವಲ್ಪ ಟಫ್ ಫೈಟ್ ಆಗಿದ್ದು ಅವರಿಗೆ ಅಲ್ಲಿ ಟಿಕೆಟ್ಮಿಸ್ ಆಗಿರುವ ಕಾರಣ, ಕಾಂಗ್ರೆಸ್ ವಲಯದಲ್ಲಿ ನಗು ತುಸು ಜೋರಾಗಿದೆ. ಇವೇ ಕಾರಣಕ್ಕೆ ರಾಜಶೇಖರ ಹಿಟ್ನಾಳ ಟಿಕೆಟ್ ತಮ್ಮದೇ ಗೆಲುವು ಸಹ ತಮ್ಮದೇ ಎನ್ನುತ್ತಿದ್ದಾರೆ. ಕೇಂದ್ರ ನಾಯಕರು ಒಪ್ಪಿಕೊಂಡಿದ್ದು ಇನ್ನೇನು ಎರಡು ದಿನದಲ್ಲಿ ಉತ್ತರ ದೊರೆಯಲಿದೆ.