ಕಾಡಾ ಅಧ್ಯಕ್ಷರಾಗಿ ಹಸನ್ ಸಾಬ್ ದೋಟಿಹಾಳ ನೇಮಕ
ಅಕ್ಷರ ಟಿವಿ, ಬದಲಾವಣೆ ಪತ್ರಿಕೆ ಸುದ್ದಿ ಜಾಲ:
ಕುಷ್ಟಗಿ: ಜಿಲ್ಲೆಯ ಪ್ರತಿಷ್ಠಿತ ಕಾಡಾ ( ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ) ಗೆ ಅಧ್ಯಕ್ಷರನ್ನಾಗಿ ಕುಷ್ಟಗಿ ಮಾಜಿ ಶಾಸಕ ಹಸನ್ಸಾಬ್ ದೋಟಿಹಾಳ ಅವರನ್ನು ಸರಕಾರ ನೇಮಿಸುವ ಮೂಲಕ ಲೋಕಸಭೆ ಹೊತ್ತಲ್ಲಿ ಉತ್ತಮ ಆಯ್ಕೆ ಮಾಡಿದ್ದಾರೆ.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯ ಮುನಿಸು ಈ ಭಾಗದ ಅಲ್ಪಸಂಖ್ಯಾತರ ಮತಬ್ಯಾಂಕಿಗೆ ಸ್ವಲ್ಪಮಟ್ಟಿಗೆ ತೊಂದರೆ ಕೊಡುತ್ತದೆ ಎನ್ನುವ ವಾತಾವರಣ ನಿರ್ಮಾಣ ಮಾಡಲಾಗುತ್ತಿತ್ತು, ಆದರೆ ದಿಢೀರ್ ನೇಮಕ ಹುಬ್ಬೇರಿಸುವಂತೆ ಮಾಡಿದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಮತಗಳು ಗಣನೀಯವಾಗಿದ್ದು, ಬಹುತೇಕರು ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದ್ದಾರೆ, ಕಾಡಾ ಆರಂಭವಾದಾಗಿನಿಂದ ಮೊದಲಬಾರಿಗೆ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ ಎಂಬುದಿ ಬಹುತೇಕ ಅಂತಿಮವಾಗಿದ್ದು ಪಟ್ಟಿ ಬಿಡುಗಡೆಗೆ ಕ್ಷಣ ಗಣನೆ ಆರಂಭವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮಾತ್ರ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಅಧಿಕಾರ ನೀಡಬಲ್ಲದು ಎಂಬುದಕ್ಕೆ ಸಾಕ್ಷಿ ಒದಗಿಸಿದೆ. ಇಬ್ಬರಿಗೆ ಸಚಿವಗಿರಿ, ವಿಧಾನಸಭೆ ಅಧ್ಯಕ್ಷ ಸ್ಥಾನ ಜೊತೆಗೆ ನಿಗಮಮಂಡಳಿ ಅವಕಾಶ ನೀಡಿದೆ. ಪ್ಅರಖರ ಮಾತುಗಾರರಾಗಿರುವ ದೋಟಿಹಾಳ ಕಾಂಗ್ರೆಸ್ ಗೆ ಈ ಚುನಾವಣೆಯಲ್ಲಿ ವರವಾಗಬಲ್ಲರು. ಅಲ್ಪಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ಅನುದಾನ ಕೊಡುವ ಭರವಸೆ ನೀಡಿರುವ ಸಿದ್ದರಾಮಯ್ಯ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದು, ಕಾಂಗ್ರೆಸ್ ಗೆಲ್ಲಿಸುವ ಮೂಲಕ ಬಿಜೆಪಿ ಗೆ ತಕ್ಕ ಉತ್ತರ ಕೊಡುತ್ತಾರಾ? ಕಾದು ನೋಡಬೇಕು. ಜಿಲ್ಲೆಯ ಪ್ರಮುಖ ನಾಯಕರಾಗಿರುವ ಹಸನ್ ಸಾಬ್ ಅವರಿಗೆ ಉತ್ತಮ ಅವಕಾಶ ನೀಡಿದ್ದಕ್ಕೆ ರಾಜ್ಯ ಸರಕಾರಕ್ಕೆ ಧನ್ಯವಾದ ಸಲ್ಲಿಸುವ ಮೂಲಕ ಹಸನ್ ಸಾಬರಿಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಅಭಿನಂದಿಸಿದ್ದಾರೆ.