ಗ್ಯಾರಂಟಿ ಯೋಜನೆ ಮನೆ ಮನೆ ಸರ್ವೆ, ಮಾಹಿತಿ ಹಂಚಿಕೆ ; ಜ್ಯೋತಿ ಗೊಂಡಬಾಳ ಸಾರಥ್ಯ
ಬದಲಾವಣೆ ಸುದ್ದಿ, ಅಕ್ಷರ ಟಿವಿ ಡೆಸ್ಕ್:
ಕೊಪ್ಪಳ: ನಗರದ ನಾಲ್ಕನೇ ವಾರ್ಡಿನಲ್ಲಿ ಇಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕೊಡುತ್ತಿರುವ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಜ್ಯೋತಿ ಗೊಂಡಬಾಳ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮಾಹಿತಿಯನ್ನು ಕಲೆ ಹಾಕಿದರು. ಸರಿ ಯೋಚನೆಗಳಲ್ಲಿ 2000 ಗೃಹಲಕ್ಷ್ಮಿ ಗೃಹಜೋತಿ ಅನ್ನಭಾಗ್ಯ ಇವನಿಗೆ ಮತ್ತು ಶಕ್ತಿ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಲಾಯಿತು. ಈ ಒಂದು ಪ್ರಯೋಜನಗಳನ್ನು ಪಡೆದುಕೊಂಡಂತ ಜನ ತಮ್ಮ ಸಂತಸವನ್ನ ಹಂಚಿಕೊಂಡರು. ತಾಂತ್ರಿಕ ದೋಷಗಳಿಂದ ತಡವಾಗಿರುವ ನಿಂತಿರುವ ಮತ್ತು ಬಂದ್ ಆಗಿರುವ ಯೋಜನೆಗಳನ್ನ ಮರು ಸ್ಥಾಪಿಸಲು ಅಗತ್ಯ ದಾಖಲೆಗಳನ್ನು ನೀಡುವಂತೆ ಸದಸ್ಯರು ವಿನಂತಿಸಿದರು ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಅಶೋಕ್ ಗೋರಂಟಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ವಾರ್ಡ್ ಸದಸ್ಯರಾದ ಅಕ್ಬರ್ ಪಾಶಾ ಪಲ್ಟನ್, ಎಸ್. ಟಿ. ಘಟಕದ ಕಾಂಗ್ರೆಸ್ ತಾಲೂಕ ಅಧ್ಯಕ್ಷ ಮಂಜುನಾಥ ಗೊಂಡಬಾಳ, ರಾಮು ಪೂಜಾರ ಸೇರಿ ಇತರರು ಇದ್ದರು.