ರೋಗಿಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು ಡಾ.ವಿಜಯಕುಮಾರ್ ಕರೆ
ಬದಲಾವಣೆ ಸುದ್ದಿ, ಗಂಗಾವತಿ:
ಇಲ್ಲಿನ ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಕಾಲೇಜ್ ಆಫ್ ನರ್ಸಿಂಗ್ ಮತ್ತು ಇನ್ಸಿಟಿಟ್ಯೂಟ್ ಆಫ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಸೈನ್ಸಸ್ ಆಶ್ರಯದಲ್ಲಿ ನಡೆದ ನಮ್ಮ ಹಬ್ಬ ಪ್ರತಿಜ್ಞಾವಿಧಿ ಮತ್ತು ದೀಪ ಬೆಳಗಿಸುವ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಬೋರ್ಡ್ ಅಧಿಕಾರಿ ಡಾ.ವಿಜಯಕುಮಾರ ಕೆ.ಆರ್. ಮಾತನಾಡಿ, ವಿದ್ಯಾರ್ಥಿಗಳು ಈ ಸಂಸ್ಥೆಯನ್ನು ಆಯ್ಕೆ ಮಾಡಿ ಒಳ್ಳೆಯ ಕೆಲಸವನ್ನು ಮಾಡಿದ್ದೀರಿ, ಇಲ್ಲಿ ನರ್ಸ್ ಹಾಗೂ ಡಾಕ್ಟರ್ ಇಬ್ಬರೂ ರೋಗಿಗಳನ್ನು ನೋಡುವದು ಪೇಶಂಟ್ ಆಗಿ ಆದರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳನ್ನು ಸ್ವಂತ ತಂದೆ ತಾಯಿ ತರಹ ಚಿಕಿತ್ಸೆ ಕೊಡುತ್ತೇವೆ ಭಿಕ್ಷುಕರಿಗೂ ಹಾಗೂ ವಿಐಪಿ ಇರಲಿ ಒಂದೇ ರೀತಿಯಲ್ಲಿ ಚಿಕಿತ್ಸೆ ಕೊಡುತ್ತೇನೆ ಆದರಿಂದ ನೀವು ಮುಂದಿನ ದಿನಗಳಲ್ಲಿ ಡಾಕ್ಟರ್ ಆಗಿ ಯಾವುದೇ ಹಳ್ಳಿಯಲ್ಲಿ ಹಾಗೂ ಪಟ್ಟಣಕ್ಕೆ ನೀವು ನೌಕರಿ ಸಿಕ್ಕರೆ ಯಾವುದೇ ಭೇದಭಾವ ಮಾಡದೆ ರೋಗಿಗಳ ಜೊತೆಗೆ ಚನ್ನಾಗಿ ವರ್ತನೆಯಿಂದ ಇದ್ದರೆ ರೋಗಿ ಬೇಗ ಗುಣಮುಖವಾಗುತ್ತಾನೆ ಎಂದರು. ಡಾ.ಸವಡಿ ಅವರು ತುಂಬಾ ಶ್ರಮಜೀವಿ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಮೂರು ಬಾರಿ ಕಾಯಕಲ್ಪ ಪ್ರಶಸ್ತಿ ಸಿಗಬೇಕಾದ್ರೇ ಸುಲಭದ ಕೆಲಸವಲ್ಲ ತಮ್ಮ ವೃತಿಯಲ್ಲಿ ಪ್ರಮಾಣಿಕವಾಗಿ ಸೇವೆಯನ್ನು ಮಾಡುವ ಮೂಲಕ ಗಂಗಾವತಿ ಸರ್ಕಾರಿ ಆಸ್ಪತ್ರೆ ರಾಜ್ಯದಲ್ಲಿ ಹೆಸರುವಾಸಿಯಾಗಿದೆ.
ಗಂಗಾವತಿ ತಾಲೂಕಿನಲ್ಲಿರುವ ಈ ಒಂದು ಸಂಸ್ಥೆ ಇನ್ನೂ ಉನ್ನತ ಮಟ್ಟದಲ್ಲಿ ಬೆಳೆಯಬೇಕು, ಈ ಸಂಸ್ಥೆಯಲ್ಲಿ ಕಲಿಯಯವದೇ ನಿಮ್ಮ ಭಾಗ್ಯ. ವಿಧ್ಯಾರ್ಥಿಗಳು ಚನ್ನಾಗಿ ಅಭ್ಯಾಸ ಮಾಡಿ ವೈದ್ಯಕೀಯ ವೃತ್ತಿಯಲ್ಲಿ ಒಳ್ಳೆಯ ಕೆಲಸವನ್ನು ಮಾಡಿದ್ದೇ ಆದರೆ ದೇವರು ನೀವು ಅನಕೊಂಡಿದ್ದನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಡುತ್ತಾನೆ ಎಂದು ವಿಧ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಎಲ್ಲಾ ವಿಧ್ಯಾರ್ಥಿಗಳು ಬೆಣದಬತ್ತಿ ಹಿಡಿದು ಪ್ರತಿಜ್ಞಾವಿಧಿ ದೀಪ ಬೆಳಗಿಸುವ ಮೂಲಕ ಪ್ರತಿಜ್ಞೆ ಮಾಡಿದರು.
ಈ ಸಂದರ್ಭದಲ್ಲಿ ಸಿಂಡಿಕೇಟ್ ಸದಸ್ಯ ಡಾ.ಆನಂದ ಕಿರಿಶ್ಯಾಳ, ಸ್ಪೂರ್ತಿ ಗ್ರೂಪ್ ಆಫ್ ಇನ್ಸಿಟಿಟ್ಯೂಷನ್ಸ್ ಅಧ್ಯಕ್ಷರಾದ ನಿರ್ಮಲ ಡಾ.ಈಶ್ವರ ಸವಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜ ಟಿ., ಪ್ರಾಚಾರ್ಯರಾದ ಡಾ.ಉಮೇಶ ವಿ.ಪುರದ, ಹೆಚ್.ಪಿ.ಆರ್.ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಅಧ್ಯಕ್ಷ ಹರಿಪ್ರಸಾದ್ ರೈ, ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಎಸ್.ಸವಡಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಗೌರಿಶಂಕರ್, ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ಉಪವಿಭಾಗ ಆಸ್ಪತ್ರೆ ಗಂಗಾವತಿ ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಶಿ.ಸವಡಿ, ವಾಣಿಜ್ಯೋದ್ಯಮಿ ವಿರೂಪಾಕ್ಷಪ್ಪ ಮುಷ್ಟಿ, ಡಾ.ಸತೀಶ್ ರಾಯ್ಕರ್, ಜಂಗಮರ ಕಲ್ಗುಡಿ ಗ್ರಾ.ಪಂ.ಅಧ್ಯಕ್ಷ ಶೃತಿ ಧನಂಜಯ್, ಎಸ್.ಕೆ.ಎನ್.ಜಿ. ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕಿ ಡಾ.ಮಮತಾಜ್ ಬೇಗಂ ಇದ್ದರು.