ಕೊಪ್ಪಳ: ರಾಜ್ಯ ಸರ್ಕಾರದ ಈ ವರ್ಷದ ಬಜೆಟ್ ನಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಮೀಸಲಿಡಬೇಕೆಂದು ರಾಜ್ಯ ಸರ್ಕಾರಕ್ಕೆ ವಿಶ್ವಕರ್ಮ ಸಮಾಜದ ಯುವ ಮುಖಂಡ ಬ್ರಹ್ಮಾನಂದ ಮಳಿಯಪ್ಪ ಬಡಿಗೇರ್ ಸರ್ಕಾರವನ್ನ ಒತ್ತಾಯಿಸಿದ್ದಾರೆ.
ಆರು ವರ್ಷಗಳಿಂದ ಇಲ್ಲಿವರೆಗೆ ಪ್ರತಿ ವರ್ಷ ಎರಡು ಕೋಟಿ ಮಾತ್ರ ಸರ್ಕಾರದವರು ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಮೀಸಲಿಡುತ್ತಿದ್ದು ಅದರಿಂದ ಯಾವುದೇ ರೀತಿಯ ಫಲಾನುಭವಿಗಳಿಗೆ ಸಾಲ ಸೌಲಭ್ಯಗಳು ತಲುಪುತ್ತಿಲ್ಲ. ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಸಾಕಷ್ಟು ಜನ ವಿಶ್ವಕರ್ಮ ಸಮಾಜದವರು ವಂಚಿತರಾಗುತ್ತಿದ್ದಾರೆ. ಇದರಿಂದ ಈ ರಾಜ್ಯದ ಹಿಂದುಳಿದ ವರ್ಗದ ನೇತಾರರು ಹಾಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಆರ್ಥಿಕ ತಜ್ಞರಾಗಿದ್ದು ಹಿಂದುಳಿದ ವಿಶ್ವಕರ್ಮರ ಅಭಿವೃದ್ಧಿಗಾಗಿ ಇವರೇ ನಿಗಮವನ್ನು ಸ್ಥಾಪನೆ ಮಾಡಿದ್ದು ಈಗ ಇವರು ಬಜೆಟ್ಟು ಮಂಡಿಸುತ್ತಿದ್ದು ಈ ಬಜೆಟ್ ನಲ್ಲಿ 100 ಕೋಟಿ ರೂಪಾಯಿಗಳನ್ನು ವಿಶ್ವಕರ್ಮ ಅಭಿವೃದ್ಧಿ ನಿಯಮಕ್ಕೆ ಮೀಸಲು ಇಡಬೇಕೆಂದು ಹಾಗೂ ವಿಶ್ವಕರ್ಮ ಅಭಿವೃದ್ಧಿ ನಿಗಮದಲ್ಲಿ ಇಲ್ಲಿಯವರೆಗೆ ಸಾಲವನ್ನು ಪಡೆದಿರುವ ವಿಶ್ವಕರ್ಮರಿಗೆ ಸಾಲ ಮನ್ನಾ ಮಾಡಬೇಕೆಂದು ಪತ್ರಕರ್ತ ಹಾಗೂ ಹೋರಾಟಗಾರ, ಸಮಾಜದ ಯುವ ಮುಖಂಡ ಬ್ರಹ್ಮಾನಂದ ಬಡಿಗೇರ ಒತ್ತಾಯ ಮಾಡಿದ್ದಾರೆ.ಜೊತೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಲಿಂಗನಬಂಡಿ ರೈಲ್ವೆ ನಿಲ್ದಾಣಕ್ಕೆ, ಜಗದ್ಗುರು ಮೌನೇಶ್ವರ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಲು ಕೊಪ್ಪಳ ಸಂಸದ ಸಂಗಣ್ಣ ಕರಡಿಗೆ ಮನವಿ ಮಾಡಿದರು.
ಸುಮಾರು ಹತ್ತು ತಿಂಗಳಿಂದ ವಿಶ್ವಕರ್ಮ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರನ್ನು ನೇಮಕ ಮಾಡವಲ್ಲಿ ವಿಳಂಬವಾಗುತ್ತಿದೆ. ವಿಶ್ವಕರ್ಮ ಅಭಿವೃದ್ಧಿ ನಿಗಮ ಮತ್ತಷ್ಟು ಸಂಕಷ್ಟದಲ್ಲಿ ಇದೆ. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಕೂಡಲೇ ಅಧ್ಯಕ್ಷರನ್ನಾಗಿ ಸಮಾಜದ ಹಿರಿಯ ಪತ್ರಕರ್ತರಾದ ಮಾರುತಿ ಬಡಿಗೇರ ರಾಯಚೂರ ಅಥವಾ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ವಸಂತ ಬಡಿಗೇರ ಬೆಂಗಳೂರು ನೇಮಕ ಮಾಡಬೇಕೆಂದು ಈ ಮೂಲಕ ಬ್ರಹ್ಮಾನಂದ್ ಎಂ ಬಡಿಗೇರ್ ಒತ್ತಾಯಿಸಿದ್ದಾರೆ.