ಆಂಜನೇಯ ಎಂಎಲ್ಸಿ ಮಾಡಲು ಮಾದಿಗ ಮಹಾಸಭಾ ಒತ್ತಾಯ
badalavane daily, aksharatvkannada news desk,
ಕೊಪ್ಪಳ : ಮಾಜಿ ಮಂತ್ರಿ ಹೆಚ್.ಆಂಜನೇಯ ಅವರಿಗೆ ಎಂಎಲ್ಸಿ ಸ್ಥಾನ ನೀಡಬೇಕು ಎಂದು ಮಾದಿಗ ಮಹಾಸಭಾ ಮುಖಂಡ ಮಲ್ಲು ಪೂಜಾರ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಸಚಿವ ಹೆಚ್.ಆಂಜನೇಯ ಅವರ ಕೊಡುಗೆ ಅಪಾರವಾದದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಹಾಗೂ ಸಮಾಜವನ್ನು ಕಟ್ಟಿ ಬೆಳೆಸುವಲ್ಲಿ ಹೆಚ್..ಆಂಜನೇಯ ಅವರು ಕೂಡ ಒಬ್ಬರಾಗಿದ್ದಾರೆ. ಅವರ ಅನುಭವ ಮೇಲ್ಮನೆಯಲ್ಲಿ ತುಂಬಾ ಅವಶ್ಯಕತೆ ಇದೆ, ನಿರಂತರವಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಅವರ ಪರಿಶ್ರಮವನ್ನು ಪರಿಗಣಿಸಿ ರಾಜ್ಯದ ಕಾಂಗ್ರೆಸ್ ನಾಯಕರು ಹಾಗೂ ವರಿಷ್ಠರು ಹೆಚ್. ಆಂಜನೇಯ ಅವರಿಗೆ ಎಂಎಲ್ಸಿ ಸ್ಥಾನವನ್ನು ನೀಡುವಂತೆ ಒತ್ತಾಯಿಸಿದರು.
ಇದೇ ವೇಳೆ ಯಲ್ಲಪ್ಪ ಹಳೆಮನಿ ಮಾತನಾಡಿ, ಹೆಚ್. ಆಂಜನೇಯ ಅವರು ವಿದ್ಯಾರ್ಥಿ ದೆಸೆಯಿಂದಲೂ ಹಲವಾರು ಹೋರಾಟಗಳನ್ನು ಮಾಡಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಹಾಗಾಗಿ ಪಕ್ಷದ ವರಿಷ್ಠರು ಎಂಎಲ್ಸಿ ಸ್ಥಾನವನ್ನು ನೀಡಬೇಕೆಂದು ಎಲ್ಲಾ ಸಮಾಜದ ಮುಖಂಡರು ಒತ್ತಾಯಿಸುತ್ತೇವೆ,
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲ ಅವರಿಗೆ ಮನವಿ ಸಲ್ಲಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾದಿಗ ಮಹಾಸಭಾದ ಮುಖಂಡರಾದ ನಿಂಗಪ್ಪ ಶಾಪುರ, ನಿಂಗಪ್ಪ ಮೈನಳ್ಳಿ, ಜುಂಜಪ್ಪ ಮಳ್ಳಿಕೇರಿ, ಗಾಳೆಪ್ಪ ಕೂಕನಪಳ್ಳಿ ಇದ್ದರು.