ರೈಲು ಸೇವೆಯಲ್ಲಿ ಬದಲಾವಣೆ
ಹುಬ್ಬಳ್ಳಿ: ಕೊಪ್ಪಳ–ಗಿಣಿಗೇರಾ ರೈಲು ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 63ರ ಬದಲಿಗೆ ಸಬ್ವೇ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ರೈಲು ಸಂಚಾರ ರದ್ದು:
ಫೆ.2ರಂದು ನರಸಾಪುರ–ಹುಬ್ಬಳ್ಳಿ, ಕಾಚಿಗುಡ–ಹುಬ್ಬಳ್ಳಿ (17225) ರೈಲು ಸೇವೆ ರದ್ದಾಗಲಿದೆ. 3ರಂದು ಹುಬ್ಬಳ್ಳಿ–ನರಸಾಪುರ, ಹುಬ್ಬಳ್ಳಿ–ಕಾಚಿಗುಡ (17226), ಹುಬ್ಬಳ್ಳಿ–ಗುಂತಕಲ್ (07337), ಗುಂತಕಲ್– ಹುಬ್ಬಳ್ಳಿ (07338), ಬೆಳಗಾವಿ–ಕಾಜಿಪೇಟೆ (07335), ಹುಬ್ಬಳ್ಳಿ– ಕಾರಟಗಿ (07381), ಕಾರಟಗಿ– ಹುಬ್ಬಳ್ಳಿ (07382). ಹುಬ್ಬಳ್ಳಿ– ಕಾರಟಗಿ (17303), 4ರಂದು ಕಾಜಿಪೇಟೆ–ಬೆಳಗಾವಿ (07336), ಕಾರಟಗಿ– ಹುಬ್ಬಳ್ಳಿ (17304) ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.
ರೈಲು ಸಂಚಾರ ಭಾಗಶಃ ರದ್ದು:
ಫೆ.2ರಂದು ಮುಂಬೈ–ಹೊಸಪೇಟೆ (11139) ರೈಲು ಸೇವೆಯನ್ನು ಗದಗ–ಹೊಸಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಹೊಸಪೇಟೆ ನಿಲ್ದಾಣದ ಬದಲು ಗದಗ ನಿಲ್ದಾಣದಲ್ಲಿ ಸೇವೆ ಕೊನೆಗೊಳ್ಳಲಿದೆ.
3ರಂದು ಹೊಸಪೇಟೆ–ಮುಂಬೈ (11140) ರೈಲು ಸೇವೆಯನ್ನೂ ಸಹ ಹೊಸಪೇಟೆ–ಗದಗ ನಿಲ್ದಾಣಗಳ ನಡುವೆ ಭಾಗಶಃ ರದ್ದು ಮಾಡಲಾಗುವುದು. ಈ ರೈಲು ಗದಗ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ.
ರೈಲುಗಳ ನಿಯಂತ್ರಣ/ ತಡವಾಗಿ ಆರಂಭ:
ಫೆ.3ರಂದು ತಿರುಪತಿ–ಹುಬ್ಬಳ್ಳಿ (07657) ರೈಲನ್ನು ಮಾರ್ಗ ಮಧ್ಯದಲ್ಲಿ 2 ಗಂಟೆ ನಿಯಂತ್ರಿಸಲಾಗುತ್ತದೆ. ವಿಜಯಪುರ–ಯಶವಂತಪುರ (06546) ರೈಲನ್ನು ವಿಜಯಪುರ ನಿಲ್ದಾಣದಿಂದ 2 ಗಂಟೆ ತಡವಾಗಿ ಆರಂಭವಾಗಲಿದೆ.