ಎನ್ ಎಸ್ ಯು ಐ ಸಂಸ್ಥಾಪನಾ ದಿನಾಚರಣೆ
ಕೊಪ್ಪಳ: ಎನ್ ಎಸ್ ಯು ಐ ಸಂಸ್ಥಾಪನಾ ದಿನದ ಹಿನ್ನಲೆಯಲ್ಲಿ ಕೊಪ್ಪಳ ಎನ್ ಎಸ್ ಯು ಐ ಯಿಂದ
ಎನ್ ಎಸ್ ಯು ಐ ಸಂಸ್ಥಾಪಕರಾದ ಮಾಜಿ ಪ್ರಧಾನ ಮಂತ್ರಿ ಭಾರತ ರತ್ನ ಶ್ರೀಮತಿ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪೂಜೆ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು.
ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಮನೋಭಾವ ಮೈಗೂಡಿಸುವ, ನ್ಯಾಯದ ಹಾದಿಯಲ್ಲಿ ಸಾಗಲು ಪ್ರೇರೇಪಿಸುವ, ನ್ಯಾಯ, ಸಮಾನತೆಗಾಗಿ ಹೋರಾಟದ ಕಿಚ್ಚು ಹೆಚ್ಚಿಸುವ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಎನ್ ಎಸ್ ಯು ಐ ಸಂಸ್ಥಾಪನಾ ದಿನ ಪ್ರೇರಣೆ ಎಂದರು.
ಮುಖಂಡರಾದ ಶಿವಕುಮಾರ್ ಗೌಡ, ತಾಲೂಕು ಅಧ್ಯಕ್ಷರಾದ ಹನುಮೇಶ್ ಬೆಣ್ಣಿ, ಜಿಲ್ಲಾ ಉಪಾಧ್ಯಕ್ಷರಾದ ಮಂಜು ಕೆ. ಪೂಜಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಭೋವಿ, ದೇವು, ಶರಣು, ಕೊಪ್ಪಳ ವಿಶ್ವವಿದ್ಯಾಲಯ ಘಟಕದ ಸದಸ್ಯರಾದ ಮರಿಯಪ್ಪ, ಶಿವರಾಜ್ ಭೋವಿ ಇತರರು ಉಪಸ್ಥಿತರು.