ಅದ್ಧೂರಿ ದುರ್ಗಾದೇವಿ ನೂತನ ದೇವಸ್ಥಾನದ ಕಳಶ ಮೂರ್ತಿ ಮೆರವಣಿಗೆ
aksharatvkannadanewsdesk
ಕೊಪ್ಪಳ: ನಗರದ ಜವಾಹರ ರಸ್ತೆ ಕುರುಬರ ಓಣಿಯ ಶ್ರೀ ದುರ್ಗಾದೇವಿ ದೇವಸ್ಥಾನದ ನೂತನ ಶಿಲಾ ದೇವಸ್ಥಾನದ ಮೂರ್ತಿ ಮತ್ತು ಕಳಶಗಳ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಸಕಲ ವಾದ್ಯ, ಕಲಾ ತಂಡಗಳ ಮೂಲಕ ಜರುಗಿತು.
ಶ್ರೀ ದುರ್ಗಾದೇವಿ ಸೇವಾ ಸಂಘದ ಪ್ರಮುಖರು ಇಂದು ಸೋಮುವಾರ ನಗರದ ಶ್ರೀ ಸಿರಸಪ್ಪಯ್ಯನ ಮಠದಿಂದ ಮೆರವಣಿಗೆಗೆ ಚಾಲನೆ ನೀಡಿದರು. ಕುರುಬರ ಓಣಿಯ ಶ್ರೀ ದುರ್ಗಾದೇವಿ ದೇವಸ್ಥಾನದವರೆಗೆ ಸಾವಿರಾರು ಜನರ ಸಂಭ್ರಮದ ಪಾಲ್ಗೊಳ್ಳುವಿಕೆಯಿಂದ ಮೆರಗು ತಂದಿತು. ನೂರಾರು ಮಹಿಳೆಯರು ಮಕ್ಕಳು ಹಸಿರು ಸೀರೆಯನ್ನುಟ್ಟು, ಕುಂಭ ಹೊತ್ತು ನಾಲ್ಕು ಗಂಟೆ ಕಾಲ ಬಿಸಿಲನ್ನು ಲೆಕ್ಕಿಸದೇ ಪಾಲ್ಗೊಂಡಿದ್ದರು. ದೇವಸ್ಥಾನ ಸಮಿತಿಯವರು ದಾರಿಯುದ್ದಕ್ಕೂ ನೀರು, ಮಜ್ಜಿಗೆ ವ್ಯವಸ್ಥೆ ಮಾಡಿದ್ದರು. ಮಧ್ಯಾಹ್ನ ಹೋಳಿಗೆ, ಶೀಕರಣೆ ಪ್ರಸಾದ ಸವಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರಾದ ನಗರಸಭೆ ಸದಸ್ಯ ಚನ್ನಪ್ಪ ಕೊಟ್ಯಾಳ, ಮಾಜಿ ನಗರಸಭೆ ಸದಸ್ಯ ರಾಮಣ್ಣ ಹದ್ದಿನ, ಮುಖಂಡರಾದ ಯಮನೂರಪ್ಪ ನಾಯಕ, ಗವಿಸಿದ್ದಪ್ಪ ಕಲ್ಲನವರ, ಬಸವರಾಜ ಪಲ್ಲೇದ, ಚನ್ನಪ್ಪ ಹಂಚಿನಾಳ, ನಾಗರಾಜ ಕಿತ್ತೂರ, ನಿಂಗಪ್ಪ ಕನಕಗಿರಿ, ಶೇಖರಪ್ಪ ಕನಕಗಿರಿ, ಬಸವರಾಜ ಚಿಲವಾಡಗಿ, ಪ್ರಕಾಶ ಮೂಗಿನ, ಗ್ಯಾನಪ್ಪ ಕನಕಗಿರಿ, ಗುಂಡಪ್ಪ ಸಣ್ಣಕ್ಕಿ, ನಿಂಗಜ್ಜ ಸಣ್ಣಕ್ಕಿ, ಪುತ್ರಪ್ಪ ಕನಕಗಿರಿ, ರಾಜು ಮಂಗಳಾಪೂರ ಇನ್ನಿತರರು ಇದ್ದರು.
ಎಪ್ರಿಲ್ ೧೧ ರಂದು ಶುಕ್ರವಾರ ಮೂರ್ತಿಗೆ ಅಭಿಷೇಕ, ಪುಷ್ಪಾಲಂಕಾರ, ನೈವೇದ್ಯ ಮತ್ತು ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಅಂದು ಮಧ್ಯಾಹ್ನ ಅನ್ನಸಂತರ್ಪಣೆ ಹಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸನ್ಮಾನ ಸಮಾರಂಭ ನಡೆಯಲಿವೆ. ಮೂರು ದಿನಗಳ ಕಾಲ ವಿಧಿವತ್ತಾಗಿ ಜಲಾದಿವಾಸ, ಧಾನ್ಯಾಧಿವಾಸ, ವಸ್ತ್ರಾಧಿವಾಸ, ನೈವೇದ್ಯ, ವಾಸ್ತುಹೋಮ, ನವಗ್ರಹ ಶಾಂತಿ ಕಾರ್ಯಕ್ರಮಗಳು ನಡೆಯಲಿವೆ.