ಕವಿ ಸಮ್ಮೇಳನದಲ್ಲಿ ಸಮಾಜ ಸೇವಕಿ ಜ್ಯೋತಿ ಗೊಂಡಬಾಳಗೆ ಸನ್ಮಾನ
ಕೊಪ್ಪಳ: ಗಂಗಾವತಿಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಈಚೆಗೆ ನಡೆದ ರಾಜ್ಯಮಟ್ಟದ ೪ನೇ ಕವಿ ಕಾವ್ಯ ಸಮ್ಮೇಳನದಲ್ಲಿ ಸಮಾಜ ಸೇವಕಿ ಜ್ಯೋತಿ ಎಂ. ಗೊಂಡಬಾಳ ಅವರನ್ನು ಹಿರಿಯ ಸಾಹಿತಿ, ಪತ್ರಕರ್ತ ರಂಜಾನ್ ದರ್ಗಾ ಅವರು ಸನ್ಮಾನಿಸಿದರು.
ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಅಧ್ಯಕ್ಷೆ, ಪ್ರಗತಿಪರ ಚಳುವಳಿಯ ಮುಂಚೂಣಿ ಮಹಿಳೆಯಾಗಿರುವ ಜ್ಯೋತಿ ಗೊಂಡಬಾಳ ಜಿಲ್ಲೆಯ ಅನೇಕ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ, ಹತ್ತಾರು ವರ್ಷ ಪಂಚಾಯತ್ ರಾಜ್ಯ ಸದಸ್ಯರಿಗೆ, ಅಧಿಕಾರಿಗಳಿಗೆ ಜಲನಿರ್ಮಲ, ಶೌಚಾಲಯ ಬಳಕೆ, ನೈರ್ಮಲ್ಯ, ಪಂಚಾಯತ್ರಾಜ್ ಕಾಯ್ದೆ, ಆರೋಗ್ಯ ಇಲಾಖೆಯ ಯೋಜನೆಗಳ ಕುರಿತು ಅಬ್ದುಲ್ ನಜೀರ್ಸಾಬ್ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯಿಂದ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ, ಅವರ ಸಾಧನೆಯನ್ನು ಪರಿಗಣಿಸಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರು, ಹಿರಿಯ ಭಾಷಾಂತರ ಸಾಹಿತಿ ಡಾ. ಜಾಜಿ ದೇವೇಂದ್ರಪ್ಪ, ಸಾಹಿತಿ, ಚಿಂತಕಿ ಮತ್ತು ಸಮ್ಮೇಳನದ ಮುಖ್ಯ ಸಂಚಾಲಕಿ ಶೈಲಜಾ ಹಿರೇಮಠ, ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಇತರರು ಇದ್ದರು.