ಸೆ. ೨೮ ರಂದು ವಾಲ್ಮೀಕಿ ಮಹಸಭಾ ಜಿಲ್ಲಾ ಪದಾಧಿಕರಿಗಳ ಆಯ್ಕೆ
ಕೊಪ್ಪಳ: ಜಿಲ್ಲಾ ವಾಲ್ಮೀಕಿ ಮಹಾಸಭಾಕ್ಕೆ ಜಿಲ್ಲಾಮಟ್ಟದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹುದ್ದೆ ಸೇರಿದಂತೆ ನೂತನ ಪದಾಧಿಕಾರಿಗಳ ಆಯ್ಕೆಗೆ ಸೆ. ೨೮ ಶನಿವಾರದಂದು ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಸಭೆ ಕರೆಯಲಾಗಿದೆ ಎಂದು ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ರಾಮಣ್ಣ ಕಲ್ಲನವರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ವಾಲ್ಮೀಕಿ ಸಮುದಾಯದ ಅಧಿಕೃತ ಸಂಘಟನೆಯಾದ ಕರ್ನಾಟಕ ವಾಲ್ಮೀಕಿ ಮಹಾಸಭಾಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು ಅದಕ್ಕಾಗಿ ಜಿಲ್ಲೆಯ ಎಲ್ಲಾ ಸಮಾಜದ ಪ್ರಮುಖರು, ತಾಲೂಕ, ಜಿಲ್ಲಾ ಪದಾಧಿಕಾರಿಗಳು ಆಗಮಿಸಿ ಸಂಘಟನೆ ಕಟ್ಟಲು ಸಹಕರಿಸಬೇಕು ಎಂದು ಕೋರಿದ್ದಾರೆ.
ಬರುವ ದಿನದಲ್ಲಿ ಸಮುದಾಯದ ಕೆಲಸ ಕಾರ್ಯಗಳನ್ನು ಇನ್ನಷ್ಟು ಅಚ್ಚುಕಟ್ಟಾಗಿ ನಿರ್ವಹಿಸಲು, ಜಿಲ್ಲಾ ಸಮಾವೇಶ ಮತ್ತು ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲು ಸಂಘಟನೆ ಪ್ರಮುಖವಾಗಿ ಕೆಲಸ ಮಾಡಲಿದೆ, ಆದ್ದರಿಂದ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದಾರೆ.