ದೋಟಿಹಾಳದ ಮುಖ್ಯದ್ವಾರ ಬಾಗಿಲು ಶಿಥೀಲ ದುರಸ್ತಿಗೆ ಒತ್ತಾಯ
ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದ ಮುದೇನೂರು ಕ್ರಾಸಿನಲ್ಲಿ ಇರುವ ದ್ವಾರಬಾಗಿಲು (ಕಮಾನ್) ಶಿಥಿಲಗೊಂಡಿತ್ತು ಹಾಗೂ ಕಳೆದ ಎರಡು ದಿನಗಳ ಹಿಂದೆ ಬೃಹತ್ ಲೋಡ್ ಲಾರಿಯೊಂದು ತಾಗಿದ ಪರಿಣಾಮವಾಗಿ ಅಲುಗಾಡುತ್ತಿದ್ದು ಸಂಬಂದಪಟ್ಟ ಅಧಿಕಾರಿಗಳು ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ ಸುಮಾರು ಹತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡ ತಾಲೂಕಿನ ಮುದೇನೂರ ಗ್ರಾಮದ ಶ್ರೀ ಚಂದ್ರಶೇಖರ ಹಾಗೂ ಶಶಿಧರ ಮಹಾಸ್ವಾಮಿಗಳ ದೇವಸ್ಥಾನ ಹಾಗೂ ದೋಟಿಹಾಳ ಗ್ರಾಮದ ಶುಕಮುನಿ ಸ್ವಾಮಿಗಳ ದೇವಸ್ಥಾನದ ಮುಖ್ಯದ್ವಾರವನ್ನು ನಿರ್ಮಾಣ ಮಾಡಿದ್ದು ಅದು ಈಗ ಶಿಥಿಲಗೊಂಡಿದ್ದು ಬೀಳುವ ಆತಂಕದಲ್ಲಿ ಜನರು ಇದ್ದಾರೆ.
ದಿನಂಪ್ರತಿಯಾಗಿ ಈ ಮುಖ್ಯದ್ವಾರದ ಕೆಳಗಿನಿಂದ ಸಾವಿರಾರು ಜನರು ಸಂಚಾರ ಮಾಡುತ್ತಿದ್ದು ಹಾಗೂ ನೂರಾರು ವಾಹನಗಳು ಸಂಚಾರ ಮಾಡುತ್ತಿದ್ದು, ಈ ಕಮಾನ್ ಹತ್ತಿರದಲ್ಲಿಯೆ ಹೋಟೆಲಗಳು, ಹೂವಿನ ವ್ಯಾಪಾರ, ಗ್ಯಾರೇಜುಗಳು ಸೇರಿದಂತೆ ಅನೇಕ ಅಂಗಡಿಗಳು ಹಾಕಿಕೊಂಡು ಜೀವಭಯದಲ್ಲಿ ವ್ಯಾಪಾರವನ್ನು ಮಾಡುತ್ತಿವೆ.
ಈ ಮುಖ್ಯದ್ವಾರದ ಎರಡು ನಾಲ್ಕು ಕಂಬಗಳು ಇದ್ದು ಇದರಲ್ಲಿ ಎರಡು ಕಂಬಗಳು ಶೀಥಿಲಗೊಂಡಿದ್ದು ಈಗಾಗಲೆ ಎರಡು ಸಲ ಲೋಡ್ ತುಂಬಿಕೊಂಡು ಹೊರಟ ಲಾರಿಗಳು ಮುಖ್ಯದ್ವಾರಬಾಗಿಲಿನ ಮೇಲ್ಬಾಗಕ್ಕೆ ತಾಗಿದ ಪರಿಣಾಮವಾಗಿ ಸಿಮೇಂಟ ಕಿತ್ತುಹೋಗಿ ಒಳಗಿನ ಕಬ್ಬಿಣದ ಸರಪಳಿಗಳು ಮಾತ್ರ ಕಾಣುತ್ತಿವೆ ಈ ದ್ವಾರದ ಕೆಳಗಡೆ ಜನರು ಜೀವ ಭಯದಿಂದ ಸಂಚಾರ ಮಾಡುತ್ತಿದ್ದಾರೆ ಸಂಬಂದಪಟ್ಟಂತಹ ಅಧಿಕಾರಿಗಳು ಈ ಮುಖ್ಯದ್ವಾರದ ಬಾಗಿಲಿನ ಬಗ್ಗೆ ಗಮನವನ್ನು ನೀಡಿ ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕಾಗಿದೆ.
ಕೋಟ್: ಶುಕ್ರವಾರ ರಾತ್ರಿ ಬೃಹತ್ ಲೋಡ್ ಲಾರಿಯೊಂದು ಈ ಮುಖ್ಯದ್ವಾರಕ್ಕೆ ಲೋಡ್ ತಾಗಿದ ಪರಿಣಾಮವಾಗಿ ದ್ವಾರದ ಕೆಳಗಿನ ಕಂಬಗಳು ಮುರಿದಿವೆ ಹಾಗೂ ಈ ದ್ವಾರ ನಿರ್ಮಾಣಗೊಂಡು ಹತ್ತು ವರ್ಷಕ್ಕೂ ಅಧಿಕವಾಗಿದ್ದು ಶಿಥಿಲಗೊಂಡಿವೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕಾಗಿದೆ. ಕಮಾನ್ ಮುಂದಿರುವ ವ್ಯಾಪಾರಸ್ಥರು.
ಕೋಟ್: ಈ ಕಮಾನ್ ಪಿಡಬ್ಲ್ಯೂಡಿ ರಸ್ತೆಯ ವ್ಯಾಪ್ತಿಗೆ ಬರುತ್ತಿದ್ದು ಪಿಡಬ್ಲ್ಯೂಡಿ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪತ್ರವನ್ನು ಬರೆಯಲಾಗುವುದು ಮಹೇಶ ಕಾಳಗಿ ಅಧ್ಯಕ್ಷರು ಗ್ರಾಪಂ ದೋಟಿಹಾಳ.