ರಾಷ್ಟ್ರ ನಿರ್ಮಾಣದಲ್ಲಿ ಕಾರ್ಮಿಕರ ಶ್ರಮ ಪ್ರಮುಖ : ಶಾಸಕ ರಾಘವೇಂದ್ರ ಹಿಟ್ನಾಳ
ಕೊಪ್ಪಳ : ಇಂದು ಕೊಪ್ಪಳ ನಗರದ ಪದಕಿ ಲೇಔಟ್ ನಲ್ಲಿ ಕೊಪ್ಪಳದ ಕರ್ನಾಟಕ ಕಟ್ಟಡ ಹಾಗೂ ಕಾರ್ಮಿಕರ ತಾತ್ಕಾಲಿಕ ವಸತಿ ನಿಲಯದ ಕಟ್ಟಡದ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ನಮ್ಮ ರಾಷ್ಟ್ರ ನಿರ್ಮಾಣ ಆಗುವಲ್ಲಿ ಕಾರ್ಮಿಕರ ಪಾತ್ರ ಪ್ರಮುಖ.ಜೀವನ ಬಂಡಿ ಸಾಗಿಸಲು ಕಾರ್ಮಿಕರು ಹಗಲು ರಾತ್ರಿಯನ್ನದೆ ಶ್ರಮಪಟ್ಟು ದುಡಿಯುತ್ತಾರೆ.ಹಗಲು ರಾತ್ರಿ ಎಂದು ನೋಡುವುದಿಲ್ಲ ಬಿಸಿಲು ಮಳೆ ಗಾಳಿಗೂ ಜಗ್ಗುವುದಿಲ್ಲ ಕಠಿಣ ಪರಿಶ್ರಮ,ಸಮರ್ಪಣಾ ಭಾವಕ್ಕೆ ಇವರು ಸಾಕ್ಷಿ.ಪರಿಸರ ಸ್ವಚ್ಛತೆ ಕಾರ್ಮಿಕರ ಕೊಡುಗೆ ಅಪಾರ.
ಕಾರ್ಮಿಕರ ವಸತಿ ನಿಲಯಕ್ಕೆ ಇಂದು ಅಡಿಗಲ್ಲು ನೆರವೇರಿಸಿದ್ದೇವೆ, ಕಳಪೆ ಕಾಮಗಾರಿ ಮಾಡದೆ ಪರಿಪೂರ್ಣತೆಯಿಂದ ಕಟ್ಟಡ ನಿರ್ಮಾಣ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇನ್ನೂ ಈ ಕಟ್ಟಡಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂಬ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿ. ಪಂ ಮಾಜಿ ಅಧ್ಯಕ್ಷರಾದ ಎಸ್. ಬಿ ನಾಗರಳ್ಳಿ, ನಗಾರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜುಲ್ಲು ಖಾದ್ರಿ,ನಗರ ಘಟಕದ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ,ನಗರಸಭೆಯ ಸದಸ್ಯರುಗಳಾದ ಮುತ್ತುರಾಜ್ ಕುಷ್ಟಗಿ, ಅಮ್ಜದ್ ಪಟೇಲ್,ಸಿದ್ದಣ್ಣ ಮ್ಯಾಗೇರಿ, ಕೆ. ಎಂ ಸೈಯದ್, ಜ್ಯೋತಿ ಎಂ. ಗೊಂಡಬಾಳ, ಸಲೀಮ್ ಅಳವಂಡಿ, ಮಂಜುನಾಥ್ ಗೊಂಡಬಾಳ, ಮಲ್ಲಿಕಾರ್ಜುನ ಪೂಜಾರ ಸೇರಿದಂತೆ ಹಲವಾರು ಮುಖಂಡರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಶನ್ : ಕೊಪ್ಪಳ ನಗರದ ಪದಕಿ ಲೇಔಟ್ ನಲ್ಲಿ ಕೊಪ್ಪಳದ ಕರ್ನಾಟಕ ಕಟ್ಟಡ ಹಾಗೂ ಕಾರ್ಮಿಕರ ತಾತ್ಕಾಲಿಕ ವಸತಿ ನಿಲಯದ ಕಟ್ಟಡದ ಭೂಮಿಪೂಜೆ ನೆರವೇರಿಸಿದರು.