ಕೊಪ್ಪಳ : ಸಸಿ ನೆಟ್ಟು ಸಚಿವ ತಂಗಡಗಿ ಜನ್ಮ ದಿನಾಚರಣೆ
ಕೊಪ್ಪಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರ ೫೪ನೇ ಜನ್ಮ ದಿನದ ಅಂಗವಾಗಿ ಸಸಿ ನೆಡುವುದರ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು.
ನಗರದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸಚಿವ ಶಿವರಾಜ್ ತಂಗಡಗಿ ಅವರ ೫೪ನೇ ಹುಟ್ಟುಹಬ್ಬದ ಅಂಗವಾಗಿ ಹತ್ತಾರು ಉಪಯುಕ್ತ ಸಸಿ ನೆಟ್ಟು ಸಚಿವರ ಕೋರಿಕೆಯನ್ನು ಈಡೇರಿಸಲಾಯಿತು, ಇದೇ ವೇಳೆ ಕೇಕ್ ಕತ್ತರಿಸಿ ಸಿಹಿ ಹಂಚಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಎಂ. ಸಯ್ಯದ್ ಅವರು ಸಸಿಗೆ ನೀರು ಹಾಕಿ ಸಚಿವ ಶಿವರಾಜ್ ತಂಗಡಗಿ ಅವರು ತಮ್ಮ ಬಗ್ಗೆ ಪ್ರೀತಿ ಅಭಿಮಾನವಿರುವವರು ಸಸಿ ನೆಡುವುದರ ಮೂಲಕ ಜನ್ಮದಿನವನ್ನು ಆಚರಿಸುವಂತೆ ಕರೆ ನೀಡಿದ್ದು ಅದರಂತೆ ಜಿಲ್ಲೆಯಾದ್ಯಂತ ಸಸಿ ನೆಡುವ ಹೊಸ ಪರಿಪಾಠ ಹಾಕಿದ್ದೇವೆ ಎಂದರು.
ಕಾಡು ಬೆಳೆಸಿ ನಾಡು ಉಳಿಸಿ ಎಂಬಂತೆ ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಗಿಡ ನೆಟ್ಟು ಪರಿಸರ ಪ್ರಜ್ಞೆ ಮೂಡಿಸಬೇಕು ಎಂದರು, ಸಚಿವ ಶಿವರಾಜ್ ತಂಗಡಗಿ ಅವರಿಗೆ ದೇವರು ಆರೋಗ್ಯ ಆಯುಷ್ಯ ನೀಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ, ಸಲೀಂ ಅಳವಂಡಿ, ಮಂಜುನಾಥ ಜಿ. ಗೊಂಡಬಾಳ, ಫಕ್ರುಸಾಬ್ ನದಾಫ್, ಖಲೀಲ್ ಅಹ್ಮದ್, ರಾಮು ಪೂಜಾರ ಮತ್ತಿತರರು ಇದ್ದರು.