ಈಶಾನ್ಯ ಪದವಿಧರ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಗೆಲುವು : ಜ್ಯೋತಿ
ಬದಲಾವಣೆ ದಿನಪತ್ರಿಕೆ ಸುದ್ದಿ
ಕೊಪ್ಪಳ: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಪದವಿಧರ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಹಾಲಿ ಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್ (ಚಂಪಾ) ಅವರು ಮತ್ತೊಮ್ಮೆ ಗೆಲ್ಲುವದು ಗ್ಯಾರಂಟಿ ಎಂದು ಕಾಂಗ್ರೆಸ್ ಮುಖಂಡೆ ಜ್ಯೋತಿ ಎಂ. ಗೊಂಡಬಾಳ ಹೇಳಿದರು.
ಅವರು ನಗರದ ವಕೀಲರು, ಪದವಿಧರರನ್ನು ಭೇಟಿ ಮಾಡಿ ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು. ಚಂದ್ರಶೇಖರ್ ಪಾಟೀಲ್ ಅವರಿಗೆ ಅಪಾರ ಅನುಭವವಿದ್ದು, ಒಂದು ಬಾರಿ ಸದಸ್ಯರಾಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ, ಪದವಿಧರರ ಹಲವು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ, ಪರಿಷತ್ನಲ್ಲಿ ಅತಿ ಹೆಚ್ಚಿನ ಪ್ರಶ್ನೆಗಳನ್ನು ಮಾಡಿ ಉತ್ತರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ, ಅನೇಕ ವಿದ್ಯಾ ಸಂಸ್ಥೆಗಳನ್ನು ನಡೆಸುವ ಮೂಲಕ ಅಲ್ಲಿನ ಸಮಸ್ಯೆಗಳ ಅರಿವಿದ್ದು, ಅವುಗಳನ್ನು ಬಗೆಹರಿಸುವ ಕೆಲಸ ಮಾಡಿದ್ದಾರೆ.
ಪ್ರಸ್ತುತ ಕಾಂಗ್ರೆಸ್ ಸರಕಾರವಿದೆ ಜೊತೆಗೆ ವಿದ್ಯಾವಂತ ನವ ಪದವಿಧರರಿಗೆ ಸರಕಾರ ಯುವನಿಧಿ ಮೂಲಕ ಸಹಾಯ ಕಲ್ಪಿಸುತ್ತಿರುವದು ಸರಕಾರದ ಉತ್ತಮ ಕಾರ್ಯವಾಗಿದ್ದು, ಈ ಭಾರಿ ಪುನಃ ಆಯ್ಕೆಯಾಗುವ ಮೂಲಕ ಅವರು ಹೆಚ್ಚಿನ ಕೆಲಸವನ್ನು ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರಕಾರ ಅವಧಿಯಲ್ಲಿ ಮಾಡಲಿದ್ದಾರೆ ಎಂದರು. ಸರಕಾರ ಯುವಜನರಿಗೆ ಉದ್ಯೋಗ, ಪದವಿಧರ ಶಿಕ್ಷಕರ ಬೇಡಿಕೆ, ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗ, ಹೊಸ ಪಿಂಚಣಿ ರದ್ದುಗೊಳಿಸುವದು, ಖಾಸಗಿ ಶಿಕ್ಷಣ ಸಂಸ್ಥೆಗಳ ಸರಕಾರಿ ವ್ಯಾಪ್ತಿಗೆ ಒಳಪಡಿಸುವದು, ಬೋಧಕ ವರ್ಗದವರ ಮುಂಬಡ್ತಿಗೆ ಕ್ರಮ, ವಸತಿ ಶಿಕ್ಷಣ ಸಂಸ್ಥೆಗಳ ಸುಧಾರಣೆ ಕ್ರಮಗಳಿಗೆ ಕಾಂಗ್ರೆಸ್ ಗೆಲುವು ಅಗತ್ಯವಿದೆ ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಗುರುಬಸವರಾಜ ಹಳ್ಳಿಕೇರಿ, ಮುಖಂಡ ಮಂಜುನಾಥ ಜಿ. ಗೊಂಡಬಾಳ, ವಕೀಲರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಂಕರ ಬಿಸನಳ್ಳಿ, ಮುಖಂಡರಾದ ಸೌಭಾಗ್ಯಲಕ್ಷ್ಮೀ ಗೊರವರ, ವಕೀಲರಾದ ಹೆಚ್. ಹೆಚ್. ಮುರಡಿ, ಹರೀಶ ವಾರದ, ಝೆಮ್. ಎಂ. ಖಾನ್, ಡಿ. ಲಂಕೇಶ, ದಾವಲ್ ಮಲಿಕ್, ಬಸವರಾಜ ಜಂಗ್ಲಿ, ದಾವಲ್ ಮಲಿಕ್, ಬೇನಾಳಪ್ಪ, ಎಸ್. ಬಿ. ಪಾಟೀಲ್, ಮಲ್ಲನಗೌಡ ಪಾಟೀಲ್, ಕಲ್ಲಪ್ಪ ಶಿವಪೂರ, ಸಿದ್ದು ಹೊಳೆಯಾಚೆ, ವಿ. ಪಿ. ಬಾಣದ, ರವಿ ಹೊಟ್ಟಿ ಇತರರು ಇದ್ದರು.