ಕೋಟೆಗಳು ನಮ್ಮ ಸಂಸ್ಕೃತಿಯ ಪ್ರತಿಕ; ಮಂಜುನಾಥ ಕೀರ್ತಿಗೌಡ
ಬದಲಾವಣೆ ಸುದ್ದಿ: ಕೊಪ್ಪಳ: ಕೋಟೆ-ಕೊತ್ತಲಗಳು, ಸ್ಮಾರಕಗಳು ನಮ್ಮ ಸಂಕ್ಕೃತಿಯ ಪ್ರತೀಕಗಳಾಗಿವೆ. ಅವು ಹಿಂದೆ ನಮ್ಮನ್ನೂ ರಕ್ಷಿಸಿದ್ದ ಸ್ಮಾರಕಗಳಾಗಿದ್ದದವು. ಇಂದು ನಾವು ಅವುಗಳನ್ನು ರಕ್ಷಿಸಬೇಕಿದೆ ಎಂದು ಶ್ರೀ ಗವಿಸಿದ್ಧೇಶ್ವರ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಮಂಜುನಾಥ ಕೀರ್ತಿಗೌಡರವರು ನುಡಿದರು. ಅವರು ಕೊಪ್ಪಳ ಚಾರಣ ಬಳಗದಿಂದ ಹಮ್ಮಿಕೊಂಡಿದ್ದ ೫ನೇ ಚಾರಣದಲ್ಲಿ ‘ಇರಕಲ್ಲಗಡಾ ಕೋಟೆ ವೀಕ್ಷಣೆ ಮತ್ತು ಚರಿತ್ರೆ ಮನನ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ನುಡಿದರು. ಹಿಂದೆ ಸ್ಮಾರಕಗಳನ್ನು ನಮ್ಮ ಅಸ್ಮಿತೆ ಎಂಬಂತೆ ನಿರ್ಮಿಸಲಾಗುತ್ತಿತ್ತು. ಅವು ನಮ್ಮ ಸಂಸ್ಕೃತಿ ಪ್ರತೀಕ ಒಂದುಕಡೆಯಾದರೆ ಮತ್ತೊಂದಡೆ ಆದೇಶಗಳೂ ಆಗಿದ್ದವು. ಅವುಗಳನ್ನು ಪಾಲಿಸುವುದು ಮತ್ತು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿತ್ತು. ಆದರೆ ಇಂದು ಅವುಗಳ ಬಗ್ಗೆ ತತ್ಸಾರ ಭಾವನೆ ಉಂಟಾಗುತ್ತಿದ್ದು ಇದು ಸರಿಯಲ್ಲ. ಇರಕಲ್ಲಗಡ ಕೋಟೆ ಮರಾಠ, ನಿಜಾಮ, ಬ್ರಿಟಿಷ್, ಹೈದರಲಿ, ಟಿಪ್ಪುಸುಲ್ತಾನ ಮುಂತಾದ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಇದನ್ನು ರಕ್ಷಿಸಬೇಕಾಗಿರುವುದು ಬಹಳ ಮುಖ್ಯ ಎಂದರು. ಪ್ರಾಧ್ಯಾಪಕಿ ಡಾ.ಗೀತ ಪಾಟೀಲ ಮಾತನಾಡಿ ಸ್ಮಾರಕಗಳನ್ನು ನಮ್ಮ ಮನೆಯಂತೆ ರಕ್ಷಿಸಬೇಕಿದೆ ಎಂದರು. ಡಾ.ವಿಜಯ ಸುಂಕದ್, ಡಾ.ಮಂಜುನಾಥ ಬಡಿಗೇರಾ, ಸಿ.ಡಿ.ಪಾಟೀಲ, ಶಿವರಾಯಪ್ಪ ನೀರಲೋಟಿ, ಅರುಣ ಶೆಟ್ಟರ, ಶಶಿಕುಮಾರ ಉಳ್ಳಾಗಡ್ಡಿ ಮುಂತಾದವರು ಮಾತನಾಡಿದರು. ಆರಂಭದಲ್ಲಿ ಸಂಚಾಲಕರಾದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ರವರು ಪ್ರಾಸ್ತವಿಕವಾಗಿ ಮಾತನಾಡಿದರು.