ಅಕ್ಷರ ಟಿವಿ ನ್ಯೂಸ್, ಬದಲಾವಣೆ ಸುದ್ದಿ:

ಕೊಪ್ಪಳ : ಪಕ್ಷ ಅಧಿಕಾರದಲ್ಲಿ ಇಲ್ಲದಾಗ ಪ್ರಾಮಾಣಿಕವಾಗಿ ದುಡಿದ ನಿಷ್ಠಾವಂತ ವಿದ್ಯಾವಂತ ಕಾರ್ಯಕರ್ತರಿಗೆ ಅಧಿಕಾರದಲ್ಲಿರುವಾಗ ಅವಕಾಶ ನೀಡಿದರೆ ಮಾತ್ರ ಪಕ್ಷದ ಬಲವರ್ಧನೆ ಸಾಧ್ಯ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಹೇಳಿದ್ದಾರೆ.
ಅವರು ಜಿಲ್ಲೆಯ ಗಂಗಾವತಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾಂಗ್ರೆಸ್ ಹಿರಿಯ ಶಾಸಕ ಮತ್ತು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಮನೆಯಲ್ಲಿ ಭೇಟಿಯಾಗಿ ಮನವಿ ಮಾಡಿದ ಅವರು, ಪಕ್ಷ ಅಧಿಕಾರದಲ್ಲಿ ಇಲ್ಲದಾಗ ಬರುವ ಮತ್ತು ನಿರಂತರವಾಗಿ ನಿಷ್ಠೆಯಿಂದ ದುಡಿದ ಕಾರ್ಯಕರ್ತರಿಂದ ಪಕ್ಷ ಅಧಿಕಾರಕ್ಕೆ ಬಂದಿದೆ, ಪಕ್ಷದ ಶಾಸಕರಿಗೆ ಬೆಲೆ ಬಂದಿದೆ, ಈಗ ಕಾರ್ಯಕರ್ತರಿಗೂ ಅಧಿಕಾರ ಕೊಟ್ಟರೆ ಮುಂದಿನ ಲೋಕಸಭೆ ಮತ್ತು ಜಿಲ್ಲಾ, ತಾಲೂಕ ಪಂಚಾಯತ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗುತ್ತದೆ, ನಿಷ್ಠಾವಂತರಿಗೆ ಬೆಲೆ ಸಿಕ್ಕಾಗ ಪಕ್ಷದ ಜೊತೆಗೆ ಹೆಚ್ಚು ಹೆಚ್ಚು ಜನರು ಗುರುತಿಸಿಕೊಳ್ಳಲು ಇಚ್ಛಿಸುತ್ತಾರೆ ಎಂದು ಅವರು ಕೇಳಿಕೊಂಡರು. ಇದೇ ವೇಳೆ ರಾಜ್ಯದಾದ್ಯಂತ ಡಾ. ಪುಷ್ಪಾ ಅಮರನಾಥ ಅವರ ನೇತೃತ್ವದಲ್ಲಿ ಮಹಿಳಾ ಘಟಕವೂ ಸಹ ಸಕ್ರಿಯವಾಗಿ ಉತ್ತಮ ಕೆಲಸ ಮಾಡಿದ್ದು, ಹೆಚ್ಚಿನ ಮಹಿಳಾ ಕಾರ್ಯಕರ್ತರಿಗೂ ನಾಮನಿರ್ದೇಶನಗಳಲ್ಲಿ ಅವಕಾಶ ಕೊಡುವಂತೆ ಮನವಿ ಸಲ್ಲಿಸಿದರು.
ಕಾಂಗ್ರೆಸ್ನ ಮುತ್ಸದ್ಧಿ ರಾಜಕಾರಿಣಿಗಳಲ್ಲಿ ಖಾದರ್ ಅವರೂ ಪ್ರಮುಖರಾಗಿದ್ದು, ಅತ್ಯಂತ ತಾಳ್ಮೆಯಿಂದ ತಮ್ಮ ಮಾತುಗಳನ್ನು ಮನವಿಯನ್ನು ಆಲಿಸಿ ನಿಶ್ಚಿತವಾಗಿ ಅದನ್ನು ಜಾರಿ ಮಾಡುವ ಹಾಗೂ ಕಾರ್ಯಕರ್ತರಿಗೆ ಮನ್ನಣೆ ಕೊಡುವ ಕೆಲಸವಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ರಜಿಯಾ ಮನಿಯಾರ, ಜಿಲ್ಲಾ ಮೈನಾರಿಟಿ ಸೆಲ್ ಅಧ್ಯಕ್ಷ ಸಲೀಂ ಅಳವಂಡಿ, ಜಿಲ್ಲಾ ಕಾರ್ಮಿಕ ಘಟಕ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪಂಡಿತ್, ಎಸ್.ಟಿ. ಸೆಲ್ ತಾಲೂಕ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ರಾಜು ಜವಳಿ ಇತರರು ಇದ್ದರು.