ಮೇ ಸಾಹಿತ್ಯ ಮೇಳ:ವಿವಿಧ ಪ್ರಶಸ್ತಿಗಳ ಪ್ರದಾನ
ಕೊಪ್ಪಳ ಮೇ 26: 10 ನೇ ಮೇ ಸಾಹಿತ್ಯ ಮೇಳದ ಅಂಗವಾಗಿ ಪ್ರಕಟವಾಗಿದ್ದ ವಿವಿಧ ಪ್ರಶಸ್ತಿಗಳನ್ನು ಇಂದು ಸಂಜೆ ಪ್ರದಾನ ಮಾಡಲಾಯಿತು.
ವಿಭಾ ಸಾಹಿತ್ಯ ಪ್ರಶಸ್ತಿ- ತೀರ್ಥಹಳ್ಳಿಯ ಸವಿರಾಜ್ ಆನಂದ್ ,ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ-ಧಾರವಾಡದ ಎಸ್.ಆರ್.ಹಿರೇಮಠ,ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ- ಕೆರೆಕೋಣದ ಮಾಧವಿ ಭಂಡಾರಿ,ನಿಂಗಪ್ಪ ಸಂಶಿ ರೈತ ಚೇತನ ಪ್ರಶಸ್ತಿ- ಬೆಳಗಾವಿಯ ಶಿವಾಜಿ ಕಾಗಣೇಕರ್, ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿ-ಜನಾರ್ದನ(ಜನ್ನಿ) ಮೈಸೂರು,
ಚಂದ್ರಶೇಖರ ಹೊಸಮನಿ ಅಂಬೇಡ್ಕರ್ ಪತ್ರಿಕಾ ಮಾರ್ಗಿ ಪ್ರಶಸ್ತಿ- ಇಂದೂಧರ ಹೊನ್ನಾಪುರ,ಲಕ್ಷ್ಮಿಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ ಪ್ರಶಸ್ತಿ-ಕೊಪ್ಪಳದ ಹುಚ್ಚಮ್ಮ ಚೌಧರಿ ಅವರಿಗೆ ಪ್ರದಾನ ಮಾಡಲಾಯಿತು.
ಡಾ.ಹೆಚ್.ಎಸ್.ಅನುಪಮಾ ಅವರು ಪ್ರಶಸ್ತಿ ಪುರಸ್ಕೃತರ ಸಾಧನೆ ,ಹೋರಾಟಗಳನ್ನು ಪರಿಚಯಿಸಿದರು.
ಪ್ರೊ.ಅಲ್ಲಮಪ್ರಭು ಬೆಟ್ಟದೂರ,ಬಸವರಾಜ ಸೂಳಿಭಾವಿ,ಮುತ್ತು ಹಾಲಕೇರಿ,ಬಿ.ಪೀರಬಾಷಾ,ಬಿ.ಶ್ರೀನಿವಾಸ,ಅನಿಲ ಹೊಸಮನಿ,ಹನುಮೇಶ ಕಲ್ಮಂಗಿ ಮತ್ತಿತರರು ವೇದಿಕೆಯಲ್ಲಿದ್ದರು.