ಸಮಕಾಲೀನ ಧರ್ಮರಾಜಕಾರಣ ದ್ಚೇಷರಾಜಕಾರಣ ಕವಿಗೋಷ್ಟಿಯಲ್ಲಿ ಅನಾವರಣ
ಕವಿ ಬರಹಗಾರ ಆತ್ಮಾವಲೋಕನ ಮಾಡಿಕೊಳ್ಳಬೇಕು : ಸಿರಾಜ್
ಕೊಪ್ಪಳ ಮೇ 25:
ಹುಟ್ಟುತ್ತಿರುವ ದ್ವೇಷದ ಮಾತುಗಳ ಸಂಖ್ಯೆ , ರೌಡಿಶೀಟರುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಸಮಾಜದಿಂದ ಮಾನ,ಸಮ್ಮಾನಗಳನ್ನು ಪಡೆಯುವ ಕವಿ ಪ್ರತಿಯಾಗಿ ಸಮಾಜಕ್ಕೆ ಏನು ನೀಡುತ್ತಿದ್ದೇನೆ ಎಂಬುದರ ಅವಲೋಕನ ಮಾಡಿಕೊಳ್ಳಬೇಕು. ಮಾತನಾಡಬೇಕಾದ ಸಂದರ್ಭದಲ್ಲಿ ಕವಿ,ಸಾಹಿತಿ ಮೌನವಾಗಿರಬಾರದು ಎಂದು ಕವಿ ಸಿರಾಜ್ ಬಿಸರಳ್ಳಿ ಕರೆ ನೀಡಿದರು.
ಕವಿಗೋಷ್ಠಿಯ ಆಶಯ ನುಡಿಗಳನ್ನಾಡಿದ ಅವರು ಸಮಾಜದಲ್ಲಿ ಹರಡಿರುವ ವಿಷವನ್ನು ತೆಗೆಯುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಮೌನವಾಗಿರುವುದು ಎಂದರೆ ಅಪರಾಧದ ಭಾಗವಾಗುವುದು ಎಂದೇ ಅರ್ಥ, ಸೇಫರ್ ಜೋನ್ ಬಿಟ್ಟು ಬರಹಗಾರ ಹೊರಬರಬೇಕಿದೆ ಎಂದು ಹೇಳಿದರು.
” ಹೊಟ್ಟೆಗೆ ಅನ್ನ ನೀಡಲು ಅಕ್ಕಿ ಕೊಡದವರು ನಾಲ್ಕು ಕಾಳು ಅಕ್ಷತೆ ಕೊಟ್ಟು ಕೈ ತೊಳೆದುಕೊಂಡಾರ” , ತುಕ್ಕು ಹಿಡಿದ ಎದೆಗಳಿಗೆ ಪ್ರೀತಿಯ ಗಾಳಿ ಹಾಯಿಸೋಣ ಎಂಬ ಆಶಯದ ಕವಿತೆಗಳು ಮೇ ಸಾಹಿತ್ಯ ಮೇಳದ ಕವಿಗೋಷ್ಟಿಯಲ್ಲಿ ವಾಚಿಸಲ್ಪಟ್ಟ ಕವಿತೆಗಳು ವರ್ತಮಾನದ ಧರ್ಮರಾಜಕಾರಣ ಹಾಗೂ ದ್ವೇಷ ರಾಜಕಾರಣದ ತಲ್ಲಣಗಳಿಗೆ ಧ್ವನಿಯಾದವು.
ಮೈಲಾರಪ್ಪ ಬೂದಿಹಾಳ ಅವರು “ಕೇಳು ದೊರೆಯೇ ನಾಡಿನ ಪ್ರಭುವೇ ನಮ್ಮ ನಾಡಿನ ಕಥೆಯನ್ನ”, ಶೈಲಜಾ ಹಿರೇಮಠ ಅವರು”ಜರತಾರಿ ಸೀರೆ ಉಟ್ಟವರು”,ಧರ್ಮದ ನಷೆ ಏರಿದವರು ಹೊಟ್ಟೆಯ ಅನ್ನಕ್ಕೆ ಅಕ್ಕಿ ಕೊಡದವರು ನಾಲ್ಕು ಕಾಳು ಅಕ್ಷತೆ ಕೊಟ್ಟಾರ ಎಂಬ ಕವಿತೆಗಳು ಸಮಕಾಲೀನ ಧರ್ಮರಾಜಕಾರಣವನ್ನು ಕಾವ್ಯದಲ್ಲಿ ಪ್ರತಿಬಿಂಬಿಸಿದವು.ಅಮೀರಸಾಬ ಒಂಟಿ ಅವರ ಕವಿತೆಯಲ್ಲಿ ದ್ವೇಷರಾಜಕಾರಣ ಅಸಹನೆಯ ನೋವು ಸಮರ್ಥವಾಗಿ ಅಭಿವ್ಯಕ್ತಿಗೊಂಡಿತು.
ಶಕುಂತಲಾ ನಾಯಕ,ಲಕ್ಷ್ಮಿ ಮಾನಸ,ಅಶೋಕ ಹೊಸಮನಿ,ಪಾರ್ವತಿ ಕನಕಗಿರಿ,ಡಾ.ನಾಗೇಶ್ ಪೂಜಾರಿ,ಮೌನೇಶ್ ನವಲಹಳ್ಳಿ,ಜಹರಾನಾ ಕೋಳೂರು,ಶ್ರೀನಿವಾಸ ದೇಸಾಯಿ,ಅಲ್ಲಾವುದ್ದೀನ್ ಯಮ್ಮಿ,ಡಾ.ಪ್ರವೀಣ್ ಪೊಲೀಸ್ಪಾಟೀಲ,ಮೌನೇಶ್ ಬಡಿಗೇರ,ನಿಂಗು ಬೆಣಕಲ್ ,ವಸುಧಾ ಪಾಟೀಲ,ವಿರೇಶ ಮೇಟಿ ಕವಿತೆಗಳನ್ನು ವಾಚಿಸಿದರು.
ಅರುಣಾ ನರೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ.ಜಾಜಿ ದೇವೇಂದ್ರಪ್ಪ, ವಿಜಯಲಕ್ಷ್ಮಿ ಕೊಟಗಿ ಮುಖ್ಯ ಅತಿಥಿಗಳಾಗಿ ಆಗಮಿಸಿ ದ್ದರು.
ಶೀಲಾ ಹಾಲ್ಕುರಿಕೆ ಹಾಗೂ ನಾಗರಾಜನಾಯಕ ಡೊಳ್ಳಿನ ಸಂಯೋಜಿಸಿದರು.