ಬದಲಾವಣೆ ಸುದ್ದಿ,
ಗಂಗಾವತಿ : ಮನೆಯ ಸುತ್ತಲೂ ಸ್ವಚ್ಚತೆ ಕಾಪಾಡಿ, ಡೆಂಗ್ಯೂ ಜ್ವರ ಭಯ ಬಿಡಿ ಎಂದು ವೈಧ್ಯಾಧಿಕಾರಿ ಡಾ.ರಮೇಶ ಹೇಳಿದರು .
ಅಂಬೇಡ್ಕರ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈಡಿಸ್ ಈಜೀಪ್ಟ್ ಎಂಬ ಸೋಂಕಿತಗೊಂಡ ಸೊಳ್ಳೆ ಕಚ್ಚುವಿಕೆಯಿಂದ ಡೆಂಗ್ಯೂ ಜ್ವರ ಬರುತ್ತದೆ ಈ ಸೊಳ್ಳೆ ಆರೋಗ್ಯ ವ್ಯಕ್ತಿಯನ್ನು ಕಚ್ಚುತ್ತಾ ಹೊಂದಂತೆ ರೋಗ ಹರಡುತ್ತಾ ಹೋಗುತ್ತದೆ ಇದರ ನಿಯಂತ್ರಣಕ್ಕೆ ಮನೆಯ ಸುತ್ತಲೂ ಸ್ವಚ್ಚತೆ, ನೀರಿನ ತೊಟ್ಟಿಗಳನ್ನು
ಶುಚಿಗೊಳಿಸುವುದು,ಮಲಗುವಾಗ ಸೊಳ್ಳೆಪರದೆಯನ್ನು ಉಪಯೋಗಿಸಿದಲ್ಲಿ ಆರೋಗ್ಯ ಕಾಪಾಡಿಕೊಳ್ಳಬಹುದು ಈ ಡೆಂಗ್ಯೂ ಜ್ವರದಿಂದ
ಮುಕ್ತರಾಗಬಹುದು ಎಂದರು.
ನಂತರ ಮಾತನಾಡಿದ
ಡಾ.ಶರಣೆಗೌಡ ಹಿರೇಗೌಡ ಡೆಂಗ್ಯೂ ವಿರೋಧಿ ದಿನಾಚರಣೆ ಗಂಗಾವತಿ ನಗರ ಸೇರಿದಂತೆ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಡೆಂಗ್ಯೂ ವಿರೋಧಿ
ದಿನಾಚರಣೆಯನ್ನು
ಆಚರಿಸಲಾಯಿತು. ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಮನೆಯ ಹಿಂದೆ ಮುಂದೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ವಾರಕ್ಕೆಒಂದು ಬಾರಿಯಾದರೂ ನೀರು ಸಂಗ್ರಹ ತೊಟ್ಟಿಗಳನ್ನು ಸ್ವಚ್ಛೆಗೊಳಿಸಿ ಮುಚ್ಚಿಡುವಂತೆ ಸಲಹೆ ನೀಡಿದರು .ಯಾವುದೇ ವ್ಯಕ್ತಿಗೆ ರೋಗಗಳ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಬೇಟಿ ನೀಡಿ ಪ್ರಥಮ ಚಿಕಿತ್ಸೆ ಪಡೆಯಿರಿ ನಿರ್ಲಕ್ಷ್ಯ ವಹಿಸದೆ ಆರೋಗ್ಯ ಕಾಪಾಡಿಕೊಳ್ಳಿ ಎಂದು
ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿ ಪ್ರಭುರಾಜ, ಮಲೇರಿಯಾ ಲಿಂಕ್ ವರ್ಕರ ಹೆಚ್.ಸುರೇಶ,ಗುರುಪ್ರಸಾದ್,ವೀರೇಶ,ರಾಜೇಸಾಬ,ಮಾಹೇವತಿ,ಸ್ಪೂರ್ತಿ ಕಾಲೇಜು ವಿಧ್ಯಾರ್ಥಿಗಳು ಸಾರ್ವಜನಿಕರು ಸೇರಿದಂತೆ ಇತರರು ಇದ್ದರು