ಗಂಗಾವತಿ:01 ಮಾನ್ಯ ಜಂಟಿ ಆಯುಕ್ತರು ಗುಲಬರ್ಗಾ ಇವರ ಆದೇಶದ ಮೇರೆಗೆ ಅಕ್ರಮ ಮರಳು ಸಾಗಾಣಿಕೆ ಮಾಡುವ ಟಿಪ್ಪರ್ ಗಳ ಮೇಲೆ ಹಾಗೂ ವಾಹನ ತೆರಿಗೆ ರೋಡ್ ಟ್ಯಾಕ್ಸ್ ಕಟ್ಟಲಾರದ ವಾಹನಗಳ ವಿರುದ್ಧ ಸೂಕ್ತ ಕ್ರಮವನ್ನು ತೇಗದುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲು ಸಾರಿಗೆ ಇಲಾಖೆಯ ಮೊಟರ್ ವಾಹನ ಹಾಗೂ ವಾಹನಗಳ ಪರಿಶೀಲನೆಗಾಗಿ ಮೊಟರ್ ವಾಹನ ನೀರಿಕ್ಷ ವಿರೇಶ ಎಂ. ಇವರು ಗಂಗಾವತಿ ನಗರದಲ್ಲಿ ಸ್ಕೂಲ್ ಬಸ್ ಮತ್ತು ಎರಡು ಟಿಪ್ಪರ್ ಗಳನ್ನು ಜಪ್ತಿ ಮಾಡಿದ್ದಾರೆ ಹಾಗೂ ಆಟೋಗಳನ್ನು ಸೂಕ್ತ ದಾಖಲೆಗಳೊಂದಿಗೆ ಮೊಟರ್ ವಾಹನ ಕಾಯ್ದೆ ಅಡಿಯಲ್ಲಿ ವಾಹನಗಳನ್ನು ಇಟ್ಟುಕೊಳ್ಳಬೇಕು ಎಂದು ವಾಹನ ಮಾಲಿಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ನಗರದಲ್ಲಿ ಅನೇಕ ಆಟೋಗಳು ಮತ್ತು ಲಾರಿ, ಕಾರು, ಟ್ರ್ಯಾಕ್ಸ್, ಟಿಪ್ಪರ್ ಗಳು ಸರಿಯಾದ ರೀತಿಯಲ್ಲಿ ರೋಡ್ ಟ್ಯಾಕ್ಸ್ ಮತ್ತು ಇನ್ಸೂರೆನ್ಸ್ ಡ್ರೈವಿಂಗ್ ಲೈಸೆನ್ಸ್ ಹೀಗೆ ಅನೇಕ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಓಡಾಡುತ್ತಿವೆ ಇದರ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.