ವಿಭಾಗಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆ
ಶ್ರೀ ಚೈತನ್ಯ ಎಸ್.ವಿ.ಎಂ. ಪಿಯು ಕಾಲೇಜಿಗೆ ಮೂರು ಬಹುಮಾನ
ಕೊಪ್ಪಳ: ಇಲ್ಲಿನ ಚುಕುನಕಲ್ ರಸ್ತೆಯಲ್ಲಿ ಇರುವ ಬಳ್ಳಾರಿ ಶ್ರೀ ಚೈತನ್ಯ ಸಮೂಹದ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮೂರು ಬಹುಮಾನಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಕಾಲೇಜಿನ ಮಹಿಳಾ ತಂಡ ಪ್ರಥಮ ಬಾರಿಗೆ ನೆಟ್ ಬಾಲ್, ಫುಟ್ಬಾಲ್ನಲ್ಲಿ ಪ್ರಥಮ ಮತ್ತು ಹ್ಯಾಂಡ್ ಬಾಲ್ನಲ್ಲಿ ದ್ವಿತಿಯ ಸ್ಥಾನ ಪಡೆದಿದ್ದಾರೆ.
ಪ್ರಥಮ ಬಂದಿರುವ ನೆಟ್ ಬಾಲ್, ಫುಟ್ಬಾಲ್ ಕಲಬುರಗಿ ವಿಭಾಗದಲ್ಲಿ ಕೊಪ್ಪಳವನ್ನು ಪ್ರತಿನಿಧಿಸಲಿದ್ದಾರೆ. ಸಾಹಿತ್ಯ ಎಂ. ಗೊಂಡಬಾಳ ಅವರ ನಾಯಕತ್ವದ ತಂಡದಲ್ಲಿ ಗ್ರೀಷ್ಮಾ ಎಂ. ರೆಡ್ಡಿ, ಅಕ್ಷಯಾ ಜಿ., ಬಿಬಿ ಬತುರ ಆಫ್ಶೀನ್, ಅರ್ಶಿಯಾ ಪರ್ವೀನ್, ಸಂಜನಾ ಹೋಟಕರ್, ಶ್ರೀಯಾ ಕರ್ಣಂ, ಮುಕ್ತಾ ಎಸ್. ಬಾಕಳೆ, ಪಲ್ಲವಿ ಎ. ಕಲಾಲ, ವೈಷ್ಣವಿ ಅರಳೆಲಿಮಠ, ವೀಣಾ ವಿ. ಹೆಚ್. ಮೊನಿಶಾ ಬಿ. ಇದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಸಹಾಯಕ ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ ಬಹುಮಾನ ವಿತರಿಸಿದರು. ಮಕ್ಕಳು ಕೊಪ್ಪಳ ಜಿಲ್ಲಾ ನೆಟ್ಬಾಲ್ ಅಸೋಸಿಯೇಷನ್ ಮೂಲಕ ತರಬೇತಿ ಪಡೆಯುತ್ತಿದ್ದಾರೆ. ನೆಟ್ಬಾಲ್ ಕ್ರೀಡಾಕೂಟದ ರೆಫರಿಗಳಾಗಿ ಹಾಸನದ ನಿರಂಜನ್ ಡಿ.ಎಲ್., ಆಕಾಶಗೌಡ ಹೆಚ್. ಎನ್. ಕಾರ್ಯನಿರ್ವಹಿಸಿದರು.
ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಶ್ರೀ ಚೈತನ್ಯ ಸಮೂಹ ಸಂಸ್ಥೆಯ ಚೇರಮನ್ ಡಾ. ಪಿ. ರಾಧಾಕೃಷ್ಣನ್, ಪ್ರಾಂಶುಪಾಲ ಕೆ. ಸತೀಶಕುಮಾರ, ಕ್ರೀಡಾ ವಿಭಾಗ ಮುಖ್ಯಸ್ಥ ಶಿವಕುಮಾರ ತಟ್ಟಿ, ಕ್ರೀಡಾ ತರಬೇತುದಾರರಾದ ರುಕ್ಮಿಣಿ ಬಂಗಾಳಿಗಿಡದ, ನೆಟ್ಬಾಲ್ ಕೋಚ್ ಅಮರೇಶ, ನೆಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ರಜಾಕ್ ಟೇಲರ್, ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅಭಿನಂದಿಸಿದ್ದಾರೆ.