Badalavane News Desk:
ಕೊಪ್ಪಳ: ವಿದ್ಯಾರ್ಥಿಗಳು ವಿಚಾರವಂತರಾಗಬೇಕು ವಿಚಾರವಂತಿಕೆ ವಿದ್ಯಾರ್ಥಿಗಳ ಆಸ್ತಿ ವಿಚಾರಗಳು ಜಗತ್ತನ್ನು ಆಳುತ್ತವೆ ಎಂದು ಕಾಂಗ್ರೆಸ್ ಯುವ ಮುಖಂಡ ಕೆ. ಸೋಮಶೇಖರ್ ಹಿಟ್ನಾಳ ವಿಚಾರ ವ್ಯಕ್ತಪಡಿಸಿದರು.
ಅವರು ತಾಲೂಕಿನ ಹೊಸಬಂಡಿಹರ್ಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ೨೦೨೪ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ವಿವಿಧ ಘಟಕಗಳ ವಾರ್ಷಿಕ ಚಟುವಟಿಕೆ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಹುದ್ದೆ ಪಡೆಯಬೇಕಾದರೂ ನಿರಂತರ ಓದು ಅವಶ್ಯಕ ಜ್ಞಾನವೆಂಬುದು ಯಾರೊಬ್ಬರ ಸ್ವತ್ತಲ್ಲ ಒಳ್ಳೆಯ ಪುಸ್ತಕಗಳನ್ನು ಸಂಗ್ರಹಿಸಿ ನಿರಂತರ ಅಧ್ಯಯನಶೀಲರಾದರೆ ಯಶಸ್ಸು ಪಡೆಯಬಹುದು ಎಂದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಕೆ. ಚಂದ್ರಶೇಖರ್, ವಿಶೇಷ ಅತಿಥಿ ಶರಣಬಸಪ್ಪ ಬೀಳೆಯಲಿ, ಪ್ರಾಂಶುಪಾಲ ಬಸವರಾಜ, ಚನ್ನಕೃಷ್ಣ ಗೊಲ್ಲರ್, ಶಂಕರ್ ಶಾಸಲ್, ಓಬಳೇಶ, ರಂಗನಾಥ, ಅಬ್ಬುಲಿಗೆಪ್ಪ, ಮಖ್ತುಂ ಭಾಗವಾನ್, ಖಾನಸಾಬ, ರೇಣುಕಮ್ಮ ಸಹಾಯಕ ಪ್ರಾಧ್ಯಾಪಕರಾದ ರಾಮಣ್ಣ ಉಪ್ಪಾರ, ಪುನಿತ, ಮಂಜುನಾಥ, ಕೆ.ಎಚ್.ರಮೇಶ, ಉಪಸ್ಥಿತರಿದ್ದರು.