ಅಕ್ಷರ ನ್ಯೂಸ್, ಗಂಗಾವತಿ : ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೂ.15000 ನೀಡಲು ಮತ್ತು ಇತರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ 13 ರ ಫೆಬ್ರವರಿ 2024 ರಿಂದ ನಡೆಯುವ ರಾಜ್ಯ ಮಟ್ಟದ ಆಶಾ ಕಾರ್ಯಕರ್ತೆಯರ ವಿಧಾನ ಸೌಧ ಚಲೋ ಹೋರಾಟದಲ್ಲಿ ನಮ್ಮ ಜಿಲ್ಲೆಯ ಎಲ್ಲಾ ಆಶಾಕಾರ್ಯಕರ್ತೆಯರು ಭಾಗವಹಿಸುತ್ತಾರೆ ಎಂದು ಆಶಾ ಕಾರ್ಯಕರ್ತರ ಸಂಘದ ಜಿಲ್ಲಾಧ್ಯಕ್ಷ ಶರಣು ಗಡ್ಡಿ ಮನವಿ ಮಾಡಿದರು.
-
ಕಳೆದ 7-8 ವರ್ಷದಿಂದ ಆಶಾ ಕಾರ್ಯಕರ್ತೆಯರಿಗೆ ಕೇಂದ್ರದ ಪ್ರೋತ್ಸಾಹಧನ ನೀಡಲು ಈ ಆನ್ಸೆನ್ ಪೋರ್ಟಲ್ಗೆ ಲಿಂಕ್ ಮಾಡಿರುವರು. ಆಗಿನಿಂದಲೂ ಇವರು ದುಡಿದಷ್ಟು ಪ್ರೋತ್ಸಾಹಧನ ಬರದೆ ಎಲ್ಲ ಕಾರ್ಯಕರ್ತೆಯರು ಸಾವಿರಾರೂ ರೂ. ನಷ್ಟ ಅನುಭವಿಸಿರುವರು. ದುಡಿದ ಈ ಬಡ ಮಹಿಳೆಯರಿಗೆ ಅನ್ಯಾಯವಾಗುತ್ತಲೇ ಇದೆ.
ಈ ಬಗ್ಗೆ ಸಂಘದಿಂದ ಹಲವಾರು ಹೋರಾಟಗಳು ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸತತವಾಗಿ ನಡೆದಿವೆ.
ಈಗಲೂ ನಡೆಯುತ್ತಲಿವೆ. ಸಂಘದ ಒತ್ತಾಯದ ಮೇರೆಗೆ ಕೇಂದ್ರದ ಪ್ರೋತ್ಸಾಹಧನ ನೀಡಲು ಈ ಆನ್ ಲೈನ್ ಪೋರ್ಟಲ್ಗೆ ಲಿಂಕ್ ಮಾಡಿರುವ ವೇತನ ಮಾದರಿ ಸುಧಾರಿಸಲು ಸತತ ಪ್ರಯತ್ನಗಳನ್ನು ಇಲಾಖೆಯಿಂದ ನಡೆದಿವೆ. ಇಲಾಖೆಯ ಈ ಪ್ರಯೋಗಗಳಿಗೆ ಸಂಘದಿಂದ ಸಹಕಾರ ನೀಡಿಯೂ ಆಗಿದೆ. ಪರಿಹಾರಕ್ಕೆ ಈ ಕುರಿತ ಪ್ರಯತ್ನಗಳು ವಿಫಲ ಆಗಿವೆ. ಈಗಾಗಲೇ ಕೋಟ್ಯಾಂತರ ನಷ್ಟವಾಗಿರುವ ಬಾಕಿ ಪ್ರೋತ್ಸಾಹಧನ ನೀಡಬೇಕಿರುವುದೂ ಇದೆ. ಇಲ್ಲಿಯವರೆಗೆ ಇಲಾಖೆಯಿಂದ ಸಮಸ್ಯೆಯ ಪರಿಹಾರಕ್ಕೆ ಈಗ ಉಳಿದಿರುವ ಒಂದೇ ಮಾರ್ಗ ಎಂದರೆ ನಿಗದಿತ ಗೌರವಧನ ನಿಗದಿಯಾಗಬೇಕಿರುವುದು. ಈ ಮೂಲಕ ನಿಜಕ್ಕೂ ಮಹಿಳೆಯರ ಪರ ಇರುವ ಸರ್ಕಾರದಿಂದ ಈ ಮಹಿಳಾ ಶೋಷಣೆ ನಿಲ್ಲಬೇಕಿದೆ! ಸದಾ ಸೇವೆಗೂ ಸಿದ್ಧ ! ಹೋರಾಟಕ್ಕೂ ಸಿದ್ಧ ಎನ್ನುವ ಆಶಾ ಕಾರ್ಯಕರ್ತೆಯರನ್ನು ಅನಿವಾರ್ಯವಾಗಿ ಇಲಾಖೆ ಬೀದಿಗೆ ಕರೆ ತರುತ್ತಿದೆ. ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದ ಮಾಸಿಕ ಗೌರವ ಧನ ಹೆಚ್ಚಿಸಬೇಕು. ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೂ.15000 ನೀಡಲು ಮತ್ತು ಇತರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ಮಟ್ಟದಲ್ಲಿ ದಿನಾಂಕ: 13-14 ಫೆಬ್ರವರಿ 2024 ರಂದು ಆಶಾ ಕಾರ್ಯಕರ್ತೆಯರ ವಿಧಾನ ಸೌಧ ಚಲೋ ಹೋರಾಟವನ್ನು ಸಂಘಟಿಸಲಾಗಿದೆ. ಈ ಹೋರಾಟದಲ್ಲಿ ನಮ್ಮ ಪಿಎಚ್ಸಿಯ ಎಲ್ಲಾ ಆಶಾ ಕಾರ್ಯಕರ್ತೆಯರು ಭಾಗವಹಿಸುತ್ತಿರುವ ಕುರಿತು ಈ ಮೂಲಕ ತಮಗೆ ಗಮನಕ್ಕೆ ತರುತ್ತಿದ್ದೇವೆ ಎಂದು ಹೇಳಿದರು.
ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಾಲೂಕು ಆರೋಗ್ಯ ನೀರಿಕ್ಷಣಾಧಿಕಾರಿ ವಿಜಯ ಪ್ರಸಾದ್ ನಿಮ್ಮ ಬೇಡಿಕೆ ಬಗ್ಗೆ ಹಿರಿಯ ವೈದ್ಯಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆಶಾ ಕಾರ್ಯಕರ್ತರ ಸಂಘದ ಕಾರ್ಯದರ್ಶಿ ಕೌಶಲ್ಯ, ಗಂಗಾವತಿ ತಾಲೂಕು ಆಶಾ ಕಾರ್ಯಕರ್ತಯರ ಸಂಘದ ಅಧ್ಯಕ್ಷ ಜ್ಯೋತಿ ಲಕ್ಷ್ಮೀ, ನಗರ ಘಟಕ ಅಧ್ಯಕ್ಷ ವಿಜಯಲಕ್ಷ್ಮಿ ಆಚಾರ್ಯ, ಕಾರ್ಯದರ್ಶಿ ಲಾಲಬಿ, ಆಶಾ ಕಾರ್ಯಕರ್ತರಾದ ಸಂಗೀತ, ಜ್ಯೋತಿ, ಸುಕನ್ಯಾ,ಲಲಿತಾ, ಶೋಭಾ,ಸೇರಿದಂತೆ ಇತರರು ಇದ್ದರು.