ಬದಲಾವಣೆ ಸುದ್ದಿ, ಕೊಪ್ಪಳ : 2024ರ ಫೆಬ್ರುವರಿಯಲ್ಲಿ ಜರಗುವ ಹಂಪಿ ಉತ್ಸವದಲ್ಲಿ ಕೊಪ್ಪಳದ ಕವಿಗಳಿಗೆ ಕವನ ವಾಚಿಸಲು ಅವಕಾಶ ದೊರಕಿದೆ. ಫೆ-2ರಂದು ಶ್ರೀ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಕೊಪ್ಪಳದ ಯುವಕವಿ ಹಾಗೂ ಶಿಕ್ಷಕ ಮಹೇಶ ಬಳ್ಳಾರಿ, ಉಪನ್ಯಾಸಕ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಹಾಗೂ ಕವಿ ಅಕ್ಬರ್.ಸಿ ಕಾಲಿಮಿರ್ಚಿಯವರಿಗೆ ಕವನ ವಾಚಿಸಲು ಅವಕಾಶ ನೀಡಲಾಗಿದೆ. ಜೊತೆಗೆ ಫೆ-3ರಂದು ಶ್ರೀ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ನಡೆಯುವ ಮಹಿಳಾ ಕವಿಗೋಷ್ಠಿಯಲ್ಲಿ ಶಿಕ್ಷಕಿ ಮತ್ತು ಮಕ್ಕಳ ಕವಿತ್ರಿ ಅರುಣಾ ನರೇಂದ್ರರವರಿಗೆ ಅವಕಾಶ ದೊರಕಿದೆ. ಉತ್ಸವದಲ್ಲಿ ಭಾಗವಹಿಸಿ ಕವನ ವಾಚಿಸುವ ಕವಿಗಳಿಗೆ ಜಿಲ್ಲೆಯ ಕವಿಬಳಗ ಅಭಿನಂದಿಸಿದೆ.